ಈಗ, ಐಆರ್‏ಸಿಟಿಸಿ ವೆಬ್ ಸೈಟ್ ಮೂಲಕ ವಿಶೇಷ ರೈಲುಗಳು, ರೈಲು ಬೋಗಿಗಳನ್ನು ಬುಕ್ ಮಾಡಿ!

ಧಾರ್ಮಿಕ ಯಾತ್ರೆ ಹಾಗೂ ವಿವಾಹ ಕಾರ್ಯಕ್ರಮಗಳಿಗೆ ಕೋಚ್ ಬುಕ್ಕಿಂಗ್ ಮಾಡಲು ಈಗ ಹೆಚ್ಚಿನ ಸಮಸ್ಯೆಯಾಗುವುದಿಲ್ಲ, ಏಕೆಂದರೇ ರೈಲ್ವೆ ಮಂಡಳಿಯ ಸೂಚನೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಧಾರ್ಮಿಕ ಯಾತ್ರೆ ಹಾಗೂ ವಿವಾಹ ಕಾರ್ಯಕ್ರಮಗಳಿಗೆ ಬೋಗಿ  ಬುಕ್ಕಿಂಗ್ ಮಾಡಲು ಈಗ ಹೆಚ್ಚಿನ ಸಮಸ್ಯೆಯಾಗುವುದಿಲ್ಲ, ಏಕೆಂದರೇ ರೈಲ್ವೆ ಮಂಡಳಿಯ ಸೂಚನೆ ಮೇರೆಗೆ ಆನ್ ಲೈನ್ ನಲ್ಲೇ ಇನ್ನು ಮುಂದೆ ಬುಕ್ಕಿಂಗ್ ಮಾಡಬಹುದಾಗಿದೆ.
ರೈಲ್ವೆ ಮಂಡಳಿಯ ಸುತ್ತೋಲೆ ಪ್ರಕಾರ, ವಿಶೇಷ ರೈಲು,  ಬೋಗಿ , ಸಲೂನ್ ಗಳನ್ನು ಪೂರ್ಣ ದರದಲ್ಲಿ ಏಕಗವಾಕ್ಷಿ ಬುಕ್ಕಿಂಗ್ ವ್ಯವಸ್ಥೆ ಮೂಲಕ ಕಾಯ್ದಿರಿಸಬಹುದಾಗಿದೆ. ವಿಶೇಷ ರೈಲು ಹಾಗೂ ಕೋಚ್ ಗಳ ಅಗತ್ಯವಿರುವವರು ಎಫ್ ಟಿಆರ್ ಮೂಲಕ  ಆನ್ ಲೈನ್ ನಲ್ಲಿ ಐಆರ್ ಸಿಟಿಸಿಯಲ್ಲಿ ಬುಕಿಂಗ್ ಮಾಡಬಹುದಾಗಿದೆ ಎಂದು ಸುತ್ತೊಲೆ ಹೊರಡಿಸಲಾಗಿದೆ.
ಈ ಮೊದಲು ಇಂತ  ಬೋಗಿ ಗಳು ಹಾಗೂ ವಿಶೇಷ ರೈಲು  ಬೇಕಾದಾಗ, ಸ್ಟೇಷನ್ ಮಾಸ್ಟರ್, ಅಥವ್ ಮುಖ್ಯ ಬುಕ್ಕಿಂಗ್ ಮೇಲ್ವಿಚಾರಕರಿಂದ ಮಾಡಿಸಬೇಕಿತ್ತು, ಎಲ್ಲಿಂದ ಪ್ರಯಾಣ, ಎಲ್ಲಿಗೆ ಪ್ರಯಾಣಿಸಬೇಕು ಎಂಬ ಮಾಹಿತಿಯನ್ನು ಬರೆದು ಬರೆದು ಬುಕ್ಕಿಂಗ್ ಮಾಡಿಸಲು ಮನವಿ ಮಾಡಲಾಗುತ್ತಿತ್ತು.
ಹಣ ಡಿಪಾಸಿಟ್ ಮಾಡಿದ ನಂತರ, ಅವರು ರಸೀದಿ ನೀಡುತ್ತಿದ್ದು ಅದರಲ್ಲಿ ಎಫ್ ಟಿ ಆರ್ ನಂಬರ್ ಮುದ್ರಿಸಿಕೊಡಲಾಗುತ್ತಿತ್ತು.ಈ ಪ್ರಕ್ರಿಯೆ ತೀರ ವಿಳಂಬವಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹು ರಾಷ್ಚ್ರೀಯ ಕಂಪನಿಗಳ ಸಿಬ್ಬಂದಿಯ ಪ್ರವಾಸ, ಧಾರ್ಮಿಕ ಯಾತ್ರೆ, ವಿವಾಹ ಕಾರ್ಯಕ್ರಮ,  ಶೈಕ್ಷಣಿಕ ಪ್ರವಾಸಗಳಿಗೆ ವಿಶೇಷ ಟ್ರೈನ್ ಮತ್ತು  ಬೋಗಿ ಗಳನ್ನು ಟ್ರಾವೆಲ್ ಏಜೆನ್ಸಿ ಮೂಲಕ ಬುಕ್ಕಿಂಗ್ ಮಾಡಿಸಲಾಗುತ್ತಿತ್ತು.
ಶೇ. 5ರಷ್ಟು ಸೇವಾಶುಲ್ಕವನ್ನು ಈಗ ಕಡಿತಗೊಳಿಸಲಾಗಿದೆ, ಇಂಥಹ ಬುಕ್ಕಿಂಗ್  ಮೇಲೆ ಶೇ 30 ರಷ್ಟು ಸೇವಾ ಶುಲ್ಕ ವಿಧಿಸಲಾಗುತ್ತಿತ್ತು.
ಇಂಥಹ ಬುಕ್ಕಿಂಗ್ ಗೆ ರೈಲ್ವೆ ಇಲಾಖೆ ಭದ್ರತೆಗಾಗಿ 50 ಸಾವಿರ ರು ಡೆಪಾಸಿಟ್ ನಿಗದಿ ಪಡಿಸಿದೆ. ಎಲ್ಲಾ ವ್ಯವಹಾರಗಳು ಆನ್ ಲೈನ್ ನಲ್ಲಿ ನಡೆಯಲಿದ್ದು ಹೊಸ ಆನ್ ಲೈನ್ ವ್ಯವಸ್ಥೆ ಶೀಘ್ರವೇ ಡಿಜಿಟಲೀಕರಣ ಗೊಳ್ಳಲಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com