ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಕುಟುಂಬ ತಾಜ್ ಮಹಲ್ ಮುಂಭಾಗ ನೀಡಿದ ಪೋಸ್
ದೇಶ
ತಾಜ್ ಮಹಲ್ ಸೌಂದರ್ಯ ಸವಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಕುಟುಂಬ
ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಕುಟುಂಬ ಇಂದು ಆಗ್ರಾಕ್ಕೆ ಭೇಟಿ ನೀಡಿ, ಪ್ರೇಮಸೌಧ ತಾಜ್ ಮಹಲ್ ಸೌಂದರ್ಯವನ್ನು ಕಣ್ತುಂಬಿಕೊಂಡಿತು.
ಆಗ್ರಾ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಕುಟುಂಬ ಇಂದು ಆಗ್ರಾಕ್ಕೆ ಭೇಟಿ ನೀಡಿ, ಪ್ರೇಮಸೌಧ ತಾಜ್ ಮಹಲ್ ಸೌಂದರ್ಯವನ್ನು ಕಣ್ತುಂಬಿಕೊಂಡಿತು.
46 ವರ್ಷದ ಜಸ್ಟಿನ್ ಟ್ರುಡ್ಯೂ ತನ್ನ ಪತ್ನಿ . ಮೂವರು ಮಕ್ಕಳು ಮಕ್ಕಳು ಹಾಗೂ ಸಂಪುಟ ಸಚಿವರ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದು, ತಾಜ್ ಮಹಲ್ ವೀಕ್ಷಿಸಿ ಅಲ್ಲಿನ ಸೌಂದರ್ಯ ಸವಿದರು.
ಪ್ರವಾಸದ ವೇಳೆಯಲ್ಲಿ ಉದ್ಯೋಗ ಸೃಷ್ಟಿ ಹಾಗೂ ಉಭಯ ದೇಶಗಳ ಜನರ ನಡುವಿನ ಸಂಬಂಧ ಬಲಗೊಳಿಸಲಾಗುವುದು ಎಂದು ಟ್ರುಡ್ಯೂ ಹೇಳಿದ್ದಾರೆ.
ನಾಳೆ ಪ್ರಧಾನಿ ನರೇಂದ್ರಮೋದಿ ಅವರ ತವರು ಜಿಲ್ಲೆ ಗುಜರಾತಿಗೆ ಟ್ರುಡ್ಯೂ ಭೇಟಿ ನೀಡಲಿದ್ದು, ಸಬರಮತಿ ಆಶ್ರಮದಲ್ಲಿನ ಮಹಾತ್ಮಗಾಂಧಿ ಸ್ಮಾರಕ ವೀಕ್ಷಿಸಲಿದ್ದಾರೆ. ಬಳಿಕ ಅಕ್ಷರಧಾಮ ದೇವಾಲಯಕ್ಕೂ ಟ್ರುಡ್ಯೂ ಭೇಟಿ ನೀಡಲಿದ್ದಾರೆ.
ಶಿಕ್ಷಣ ಮತ್ತು ಬಂಡವಾಳ ಹೂಡಿಕೆ ಅವಕಾಶ ಕುರಿತಂತೆ ಭಾರತೀಯ ನಿರ್ವಹಣಾ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಟ್ರುಡ್ಯೂ ಸಂವಾದ ನಡೆಸಲಿದ್ದಾರೆ.

