ಬ್ಯಾಂಕ್ ವಂಚನೆ ಕೇಸ್ : ಗೀತಾಂಜಲಿ ಮಳಿಗೆ ಮೇಲೆ ಇಡಿ ದಾಳಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಪುರದಲ್ಲಿನ ಗೀತಾಂಜಲಿ ಅಭರಣ ಮಳಿಗೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ರಾಯಪುರದಲ್ಲಿನ ಗೀತಾಂಜಲಿ ಅಭರಣ ಮಳಿಗೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ರಾಯಪುರದಲ್ಲಿನ ಗೀತಾಂಜಲಿ ಅಭರಣ ಮಳಿಗೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ರಾಯಪುರ; ಪಂಜಾಬ್  ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಪುರದಲ್ಲಿನ ಗೀತಾಂಜಲಿ ಅಭರಣ ಮಳಿಗೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ಈ ಪ್ರಕರಣ ಸಂಬಂಧ ದೇಶಾದ್ಯಂತ 21 ಕಡೆಗಳಲ್ಲಿ ನಿನ್ನೆ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚಾರಣೆ ನಡೆಸಿದೆ. ಅಲ್ಲದೇ, ಸುಮಾರು 20 ಕೋಟಿ ರೂ, ಮೌಲ್ಯದ  ಚಿನ್ನ, ಬೆಳ್ಳಿ, ಮತ್ತಿತರ ಅಭರಣವನ್ನು ವಶಪಡಿಸಿಕೊಂಡಿದೆ.

ನೀರವ್ ಮೋದಿಗೆ ಸೇರಿದ ದೆಹಲಿ, ಮುಂಬಯಿ, ಗುಜರಾತ್ ಮತ್ತಿತರ ಕಡೆಗಳಲ್ಲಿ ತನಿಖಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದು, 5, 649 ಕೋಟಿ ರೂ. ಮೊತ್ತದ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದೆ,

ನೀರವ್ ಮೋದಿ ಹಾಗೂ ಆತನ ಪತ್ನಿ ಅಮಿ, ಸಹೋದರ ನಿಶಾಲ್ ಮತ್ತು ಸಂಬಂಧಿ ಮೆಹೂಲ್ ಚೊಕ್ಸಿ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲಾದ ಬಳಿಕ ಜಾರಿ ನಿರ್ದೇಶನಾಲಯ ದಾಳಿ ಆರಂಭಿಸಿದ್ದು, ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com