ಪಾಕಿಸ್ತಾನದಲ್ಲಿ ಚೀನಾದ ಮ್ಯಾಂಡರಿನ್ ಮತ್ತು ಕ್ಯಾಂಟನೀಸ್ ಗಳಿಗೆ ಅಧಿಕೃತ ಭಾಷೆ ಸ್ಥಾನ!

ಪಾಕಿಸ್ತಾನದಲ್ಲಿ ಚೀನಾದ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸುವ ಮಸೂದೆಗೆ ಅಲ್ಲಿನ ಸೆನೆಟ್ ಒಪ್ಪಿಗೆ ಸೂಚಿಸಿದೆ.
ಪಾಕಿಸ್ತಾನ
ಪಾಕಿಸ್ತಾನ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಚೀನಾದ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸುವ ಮಸೂದೆಗೆ ಅಲ್ಲಿನ ಸೆನೆಟ್ ಒಪ್ಪಿಗೆ ಸೂಚಿಸಿದೆ. 
ಈ ಬೆಳವಣಿಗೆ ಬಗ್ಗೆ ಪಾಕಿಸ್ತಾನದ ಮಾಧ್ಯಮ ವರದಿಗಳನ್ನು ಎಎನ್ಐ ಉಲ್ಲೇಖಿಸಿದ್ದು, ಚೀನಾದ ಮ್ಯಾಂಡರಿನ್ ಮತ್ತು ಕ್ಯಾಂಟನೀಸ್ ಭಾಷೆಗಳು ಇನ್ನು ಮುಂದೆ ಪಾಕಿಸ್ತಾನದಲ್ಲಿ ಅಧಿಕೃತ ಭಾಷೆಗಳಾಗಿ ಗುರುತಿಸಿಕೊಳ್ಳಲಿವೆ. ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಮೂಲಕ ಪಾಕಿಸ್ತಾನವನ್ನು ನಿಯಂತ್ರಿಸುತ್ತಿರುವ ಚೀನಾ ಪಾಕಿಸ್ತಾನವನ್ನು ತನ್ನ ವಸಾಹತು ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂಬ ವಿಶ್ಲೇಷಣೆ ಈ ನಡೆದಿತ್ತು, ಪಾಕಿಸ್ತಾನದಲ್ಲಿ ಚೀನಾ ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಪರಿಗಣಿಸುವ ಮಸೂದೆ ಅಂಗೀಕಾರವಾಗಿರುವುದು ಈ ಹಿಂದಿನ ವಿಶ್ಲೇಷಣೆಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತಿದೆ. 
ಚೀನಾದಲ್ಲಿ ಮ್ಯಾಂಡರಿನ್ ಭಾಷೆಯನ್ನು ಹೆಚ್ಚಿನ ಸಂಖ್ಯಯ ಜನರು ಬಳಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com