ಪಂಚಕುಲ ಹಿಂಸಾಚಾರ: 53 ಡೇರಾ ಸಚ್ಚಾ ಸೌಧ ಅನುಯಾಯಿಗಳ ವಿರುದ್ಧ ಪ್ರಕರಣ ವಜಾ

ಪಂಚಕುಲ ಡೇರಾ ಸಚ್ಚಾ ಸೌದ ಹಿಂಸೆ ಪ್ರಕರಣದಲ್ಲಿ 53 ಡೇರಾ ಸಚ್ಚಾ ಸೌದ ಅನುಯಾಯಿಗಳ ವಿರುದ್ಧದ ಕೊಲೆ ಯತ್ನ' ಮತ್ತು 'ದೇಶದ್ರೋಹ' ಆರೋಪಗಳನ್ನು ಹರಿಯಾಣ ಪಂಚಕುಲ ನ್ಯಾಯಾಲಯ ಕೈಬಿಟ್ಟಿದೆ.
ಪಂಚಕುಲ ಹಿಂಸಾಚಾರ: 53 ಡೇರಾ ಸಚ್ಚಾ ಸೌಧ ಅನುಯಾಯಿಗಳ ವಿರುದ್ಧ ಪ್ರಕರಣ ವಜಾ
ಪಂಚಕುಲ ಹಿಂಸಾಚಾರ: 53 ಡೇರಾ ಸಚ್ಚಾ ಸೌಧ ಅನುಯಾಯಿಗಳ ವಿರುದ್ಧ ಪ್ರಕರಣ ವಜಾ
ಪಂಚಕುಲ (ಹರಿಯಾಣ): ಪಂಚಕುಲ ಡೇರಾ ಸಚ್ಚಾ ಸೌದ ಹಿಂಸೆ ಪ್ರಕರಣದಲ್ಲಿ 53 ಡೇರಾ ಸಚ್ಚಾ ಸೌದ ಅನುಯಾಯಿಗಳ ವಿರುದ್ಧದ ಕೊಲೆ ಯತ್ನ' ಮತ್ತು 'ದೇಶದ್ರೋಹ' ಆರೋಪಗಳನ್ನು ಹರಿಯಾಣ ಪಂಚಕುಲ ನ್ಯಾಯಾಲಯ ಕೈಬಿಟ್ಟಿದೆ.
ಆಪಾದನೆಗೆ ಪುಷ್ಟಿ ನೀಡುವ ಸಿಸಿಟಿವಿ ದೃಶ್ಯಗಳನ್ನು ಒಳಗೊಂಡಂತೆ ಪುರಾವೆಗಳನ್ನು ಸಲ್ಲಿಸಲು ಪೊಲೀಸರು ವಿಫಲರಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಬಿಟ್ಟದ್ದಾಗಿ ನ್ಯಾಯಾಲಯ ಹೇಳಿದೆ.
ಪಂಚಕುಲ ಡೇರಾ ಉಸ್ತುವಾರಿ ಚಮಕೌರ್ ಸಿಂಗ್ ಮತ್ತು ಮಾಧ್ಯಮ ಸಂಯೋಜಕ ಸುರಿಂದರ್ ಧಿಮಾನ್ ಇನ್ಸಾನ್ ಸಹ ಆರೋಪಿಗಳ ಪಟ್ಟಿಯಲ್ಲಿದ್ದರು ಎಂದು ಮಾದ್ಯಮ ವರದಿ ಹೇಳಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307, 121 ಮತ್ತು 121-ಎ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲುಗೊಂಡಿತ್ತು. ಎಲ್ಲಾ 53 ಆರೋಪಿಗಳೂ ಹಿಂಸಾಚಾರ ಮತ್ತು ಇತರೆ ಆರೋಪದಡಿಯಲ್ಲಿ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ  ವಿಚಾರಣೆ ಎದುರಿಸುತ್ತಿದ್ದರು.
ಕಳೆದ ವರ್ಷ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ರಾಮ್ ರಹೀಮ್ ಬಾಬಾ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿ ದಾಖಲಿಸಿದ ಬೆನ್ನಲ್ಲಿ ಹರಿಯಾಣದಲ್ಲಿ ಉಂಟಾದ ಹಿಂಸಾಚಾರದಲ್ಲಿ 36 ಮಂದಿ ಪ್ರಾಣ ಬಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com