
ನವದೆಹಲಿ: ಪ್ರಧಾನಿ ನರೇಂದ್ರಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ. ನರೇಂದ್ರಮೋದಿ ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಲಲಿತ್ ಮೋದಿ ಮೊದಲು ನಂತರ ವಿಜಯ್ ಮಲ್ಯ ಈಗ ನೀರವ್ ಮೋದಿ ದೇಶದಿಂದ ಓಡಿ ಹೋಗಿದ್ದಾರೆ. ಎಲ್ಲಾ ಸನ್ನಿವೇಶಗಳು ಪ್ರಧಾನಿ ನರೇಂದ್ರಮೋದಿಯಿಂದಲೇ ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
पहले ललित फिर माल्या
अब नीरव भी हुआ फरार
कहाँ है 'न खाऊँगा, न खाने दूँगा' कहने वाला देश का चौकीदार?
साहेब की खामोशी का राज़ जानने को जनता बेकरार
उनकी चुप्पी चीख चीख कर बताए
वो किसके हैं वफादार
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ದೀಪಕ್ ಮೋದಿ ಹಾಗೂ ಮೆಹುಲ್ ಚಿನುಬಾಯಿ ಕೊಕ್ಸಿ ಭಾಗಿಯಾಗಿದ್ದಾರೆ
ಎಂಬುದು ತಿಳಿದುಬಂದ ನಂತರ ರಾಹುಲ್ ಗಾಂಧಿ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ, ಆತನ ಕುಟುಂಬ ಹಾಗೂ ಗೀತಾಂಜಲಿ ಆಭರಣ ಮಳಿಗೆ ಮಾಲೀಕ ಮೆಹೂಲ್ ಕೊಕ್ಸಿ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ.
ಜನವರಿ 31 ರಂದು ನಡೆದಿದ್ದ 280 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ, ಆತನ ಹೆಡಂತಿ ಅಮಿ, ಸಹೋದರ, ನಿಶಾಲ್ ಮತ್ತು ಮೆಹೂಲ್ ಕೊಕ್ಸಿ ವಿರುದ್ಧ ಸಿಬಿಐ ಕೇಸ್ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದೆ.
ಹಣ ವರ್ಗಾವಣೆ ಪ್ರಕರಣದಡಿ ಸಿಬಿಐ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮೂಲಕ ನೀರವ್ ಮೋದಿ ನಕಲಿ ಖಾತರಿ ಪತ್ರ ಪಡೆದು ವಿದೇಶದಲ್ಲಿ ಬೇರೊಂದು ಬ್ಯಾಂಕಿನಿಂದ ಹಣ ಪಡೆಯುತ್ತಿದ್ದರು.
2011ರಿಂದಲೂ ಈ ಅವ್ಯವಹಾರ ನಡೆಯುತ್ತಿದ್ದರೂ.ಜನವರಿ 31 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬಿಐನಲ್ಲಿ ದೂರು ದಾಖಲಿಸಿದ ಬಳಿಕವಷ್ಟೇ ಈ ಪ್ರಕರಣ ಬೆಳಕಿಗೆ ಬಂದಿದೆ.
Advertisement