
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಸುಪ್ರೀಂಕೋರ್ಟಿಗೆ ಇಂದು ಅರ್ಜಿ ಸಲ್ಲಿಸಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಉನ್ನತ ಅಧಿಕಾರಿಗಳಿಗೆ ಕಮಿಷನ್ ಆಸೆ ಹುಟ್ಟಿಸಿ ನಕಲಿ ಖಾತರಿ ಪಡೆಯುವ ಮೂಲಕ ವಿದೇಶದಲ್ಲಿನ ಇತರ ಭಾರತೀಯ ಸಾಲಗಾರರಿಂದ ಸಾಲ ಪಡೆದು ವಂಚಿಸುತ್ತಿದ್ದ ಪ್ರಕರಣ ಕಳೆದ ವಾರ ಬೆಳಕಿಗೆ ಬಂದಿತ್ತು.
11,440 ಕೋಟಿ ಹಾಗೂ 280 ಕೋಟಿ ಹಗರಣ ಸಂಬಂಧ ನೀರವ್ ಮೋದಿ , ಆತನ ಕುಟುಂಬ ಹಾಗೂ ಗೀತಾಂಜಲಿ ಆಭರಣ ಮಳಿಗೆ ಮಾಲೀಕ ಮೆಹೂಲ್ ಕೊಕ್ಸಿ ವಿರುದ್ಧ ಪಂಬಾಬ್ ನ್ಯಾಷನಲ್ ಬ್ಯಾಂಕ್ ಎರಡು ವಂಚನೆ ಪ್ರಕರಣ ದಾಖಲಿಸಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇಂದು ಮುಂಬೈಯ ಎಂಸಿವಿ ಬ್ರಾಡಿ ಹೌಸ್ ನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದೆ.
ಪುಣೆ ಫೆಸಿಪಿಕ್ ಮಾಲ್ ಹಾಗೂ ಕೋಲ್ಕತ್ತಾದ ನಕ್ಷತ್ರ ಶೋ ರೂಂ ನಲ್ಲಿರುವ ಗೀತಾಂಜಲಿ ಆಭರಣ ಮಳಿಗೆಗಳ ಮೇಲೂ ಜಾರಿ ನಿರ್ದೇಶನಾಲಯ ಇಂದು ದಾಳಿ ನಡೆಸಿದೆ. ಈ ಹೈಪ್ರೋಪೈಲ್ ಕೇಸಿನ ಸಂಬಂಧ ವಕೀಲ ವಿಜಯ್ ಅಗರ್ ವಾಲ್ ನೀರವ್ ಮೋದಿ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ.
Advertisement