ಕಾನ್ಪುರ: ಬ್ಯಾಂಕ್ ಗಳಿಗೆ 800 ಕೋಟಿ ರುಪಾಯಿ ಸಾಲ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ರೋಟೋಮ್ಯಾಕ್ ಪೆನ್ ಸಂಸ್ಥೆಯ ಮಾಲೀಕ ವಿಕ್ರಮ ಕೊಠಾರಿ ಅವರು ಯಾವುದೇ ವಂಚನೆ ಮಾಡಿಲ್ಲ. ಇದು ಸಾಲ ಮರುಪಾವತಿ ಮಾಡದ ಪ್ರಕರಣ ಅಷ್ಟೆ ಎಂದು ಅವಕ ವಕೀಲ ಶರದ್ ಕುಮಾರ್ ಬಿರ್ಲಾ ಅವರು ಸೋಮವಾರ ಹೇಳಿದ್ದಾರೆ.
ವ್ಯವಹಾರಕ್ಕಾಗಿ ನನ್ನ ಕಕ್ಷಿದಾರ ಬ್ಯಾಂಕ್ ಗಳಿಂದ ಲಂಚ ಪಡೆದಿದ್ದಾರೆ. ಅದರಲ್ಲಿ ಯಾವುದೇ ವಂಚನೆ ಎಸಗಿಲ್ಲ. ಇದು ಕೇವಲ ಸಾಲ ತೀರಿಸದ ಪ್ರಕರಣ. ಈ ಬಗ್ಗೆ ನಾನು ಇನ್ನು ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ ಎಂದು ಬಿರ್ಲಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಇನ್ನು ರೋಟೋಮ್ಯಾಕ್ ಸಂಸ್ಥೆಯ ಮಾಲೀಕರು ವಿವಿಧ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ರು. ಸಾಲ ಮಾಡಿ ತೀರಸದೇ ನಾಪತ್ತೆಯಾಗಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಕೊಠಾರಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೊಠಾರಿ, ತಾವು ದೇಶ ಬಿಟ್ಟು ಹೋಗಿಲ್ಲ. ಕಾನ್ಪುರದಲ್ಲೇ ಇದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಸಂಸ್ಥೆಯ ವಕ್ತಾರರೊಂದಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಿಕ್ರಮ್ ಕೊಠಾರಿ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಗಳೆಲ್ಲಾ ಸುಳ್ಳು. ತಾವು ದೇಶ ಬಿಟ್ಟು ಹೋಗಿಲ್ಲ. ಕಾನ್ಪುರದಲ್ಲೇ ಇದ್ದೇನೆ ಎಂದು ಹೇಳಿದ್ದಾರೆ.