ಮೆಹುಲ್ ಚೊಕ್ಸಿ
ದೇಶ
ಮೆಹುಲ್ ಚೊಕ್ಸಿ ವಿರುದ್ಧ ತನಿಖೆ ನಡೆಸಿ: ಪೊಲೀಸರಿಗೆ ದೆಹಲಿ ಹೈಕೋರ್ಟ್ ಆದೇಶ
ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ 2016ರಲ್ಲಿ ಗೀತಾಂಜಲಿ ಜೆಮ್ಸ್ ಸಂಸ್ಥೆಯ ನಿರ್ದೇಶಕ ಮೆಹುಲ್ ಚೊಕ್ಸಿ ವಿರುದ್ಧ ದಾಖಲಾಗಿರುವ....
ನವದೆಹಲಿ: ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ 2016ರಲ್ಲಿ ಗೀತಾಂಜಲಿ ಜೆಮ್ಸ್ ಸಂಸ್ಥೆಯ ನಿರ್ದೇಶಕ ಮೆಹುಲ್ ಚೊಕ್ಸಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತು ತನಿಖೆ ನಡೆಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಪೊಲೀಸರಿಗೆ ಆದೇಶಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ 11, 300 ಕೋಟಿ ರುಪಾಯಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೊಕ್ಸಿ ವಿರುದ್ಧ ದೆಹಲಿ ವ್ಯಾಪಾರಿ ವೈಭವ್ ಖುರಾನಿ ಅವರು 2016ರಲ್ಲಿ ಪ್ರಕರಣ ದಾಖಲಿಸಿದ್ದರು.
ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತ ಗುಪ್ತಾ ಅವರ ಪೀಠ, ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆಯೇ ಅಥವಾ ತನಿಖಾಧಿಕಾರಿಯ ನೇತೃತ್ವದಲ್ಲಿ ದೂರುದಾರರು ಮತ್ತು ಆರೋಪಿಗಳು ರಾಜಿ ಮಾಡಿಕೊಳ್ಳಲು ಮಾತುಕತೆ ನಡೆಸಲು ಯತ್ನಿಸುತ್ತಿದ್ದಾರೆ ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಗೀತಾಂಜಲಿ ಜೆಮ್ಸ್ ನಿಂದ ಫ್ರಾಂಚೈಸಿ ಪಡೆದಿದ್ದ ಖುರಾನಿ ರಜೋರಿ ಗಾರ್ಡನ್ ಲ್ಲಿ ಗೀತಾಂಜಲಿ ಆಭರಣಗಳ ಶೋರೂಮ್ ತೆರೆದಿದ್ದರು. ಕಂಪನಿಗೆ ಠೇವಣಿ ಇಟ್ಟಿದ್ದರೂ ಮೂರು ಕೋಟಿ ರುಪಾಯಿ ಮೊತ್ತ ಆಭರಣ ನೀಡಿರಲಿಲ್ಲ. ಅಲ್ಲದೆ ಕೊಟ್ಟ ಆಭರಗಳಗಳು ಕಳಪೆಯಾಗಿದ್ದವು. ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವ್ಯವಹಾರದಲ್ಲಿ ಆರೋಪಿಯಾಗಿರುವ ನೀರವ್ ಮೋದಿ ಹಾಗೂ ಮೆಹುಲ್ ಚೊಕ್ಸಿ ಪಾಸ್ ಪೋರ್ಟ್ ಅನ್ನು ನಾಲ್ಕು ವಾರಗಳ ಕಾಲ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರದ್ದುಗೊಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ