ನೀರವ್ ಮೋದಿ ಶೋರೂಮ್ ನಿಂದ ಆಭರಣ ಖರೀದಿ: ಸಿಂಘ್ವಿ ಪತ್ನಿಗೆ ಐಟಿ ನೋಟಿಸ್

ನೀರವ್ ಮೋದಿ ಶೋ ರೂಮ್ ನಿಂದ ಆಭರಣ ಖರೀದಿಗೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರ ಪತ್ನಿ ಅನಿತಾ ಸಿಂಘ್ವಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ  ಚಿತ್ರ
ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಚಿತ್ರ
Updated on

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ  ಶೋ ರೂಮ್ ನಿಂದ ಆಭರಣ ಖರೀದಿಗೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರ ಪತ್ನಿ ಅನಿತಾ ಸಿಂಘ್ವಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

 ನೀರವ್ ಮೋದಿ ಶೋ ರೂಮ್ ನಿಂದ ಖರೀದಿಸಿರುವ  ಸುಮಾರು 6 ಕೋಟಿ ರೂ. ಮೊತ್ತದ ಚಿನ್ನಾಭರಣದ ಬಗ್ಗೆ ವಿವರ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಈ ಆರೋಪವನ್ನು ತಿರಸ್ಕರಿಸಿರುವ ಸಿಂಘ್ವಿ, ಪ್ರತಿಪಕ್ಷದ ರಾಜಕೀಯ ಪಕ್ಷಕ್ಕೆ ತಾವೂ ಸೇರಿರುವುದರಿಂದ ವಿನಾಕಾರಣ ತಮ್ಮ ಕುಟುಂಬದ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ಖರೀದಿಸಲಾಗಿದ್ದ ಅಭರಣಕ್ಕೆ ಎಷ್ಟು ಮೊತ್ತದ ಹಣ, ಚೆಕ್ ನೀಡಲಾಗಿದೆ ಎಂಬುದರ ಬಗ್ಗೆ ವಿವರ ನೀಡುವಂತೆ ನಿನ್ನೆ ದಿನ ಅನಿತಾ ಸಿಂಘ್ವಿ ಅವರಿಗೆ ನೋಟಿಸ್ ನೀಡಲಾಗಿದೆ.

ಅನಿತಾ ಸಿಂಘ್ವಿ 1.5 ಕೋಟಿಯನ್ನು ಚೆಕ್ ಮೂಲಕವಾಗಿ ಹಾಗೂ 4.8 ಕೋಟಿ ರೂ. ನಗದು ಹಣ ಪಾವತಿಸಿರುವುದು ಕಂಡುಬಂದಿದ್ದು, ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಆದರೆ, ಈ ಆರೋಪವೆಲ್ಲಾ ಸುಳ್ಳು ಆಗಿದ್ದು, ಕಾನೂನು ಪ್ರಕಾರ ಆದಾಯ ತೆರಿಗೆ ಇಲಾಖೆಗೆ ಉತ್ತರ ನೀಡುವುದಾಗಿ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com