ಪ್ರಧಾನಿ ಕಾರ್ಯಾಲಯ ನಿದ್ದೆ ಮಾಡುತಿತ್ತಾ? ಪ್ರಧಾನಿ ಜೊತೆ ನೀರವ್ ಮೋದಿ ಪೊಟೋ ಕುರಿತು ಶತ್ರುಘ್ನ ಸಿನ್ಹಾ ಪ್ರಶ್ನೆ

ಪಂಜಾಬ್ ನ್ಯಾಷನಲ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪ್ರಧಾನಮಂತ್ರಿ ಕಾರ್ಯಾಲಯದ ವಿರುದ್ಧ ಮತ್ತೆ ಗುಡುಗಿದ್ದಾರೆ.
ದಾವೋಸ್ ನಲ್ಲಿ ನೀರವ್ ಮೋದಿ ಪ್ರಧಾನಿ ನರೇಂದ್ರಮೋದಿ ವೇದಿಕೆಯಲ್ಲಿ ಕಂಡುಬಂದ ಚಿತ್ರ
ದಾವೋಸ್ ನಲ್ಲಿ ನೀರವ್ ಮೋದಿ ಪ್ರಧಾನಿ ನರೇಂದ್ರಮೋದಿ ವೇದಿಕೆಯಲ್ಲಿ ಕಂಡುಬಂದ ಚಿತ್ರ

 ನವದೆಹಲಿ: ಪಂಜಾಬ್ ನ್ಯಾಷನಲ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪ್ರಧಾನಮಂತ್ರಿ ಕಾರ್ಯಾಲಯದ ವಿರುದ್ಧ ಮತ್ತೆ ಗುಡುಗಿದ್ದಾರೆ.

ದಾವೋಸ್ ನಲ್ಲಿ ಇತ್ತೀಚಿಗೆ ನಡೆದ ವಿಶ್ವ ಆರ್ಥಿಕ ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಜೊತೆಯಲ್ಲಿಯೇ ನೀರವ್ ಮೋದಿ ಇರುವ ಪೊಟೋ ಹಾಕಿದ್ದ ಪ್ರಧಾನಮಂತ್ರಿ ಕಾರ್ಯಾಲಯವನ್ನು  ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ.

ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಯಶವಂತ ಸಿನ್ಹಾ ಸೇರಿದಂತೆ ತಮ್ಮನ್ನು ಪ್ರಧಾನಿ ನರೇಂದ್ರಮೋದಿ ಜೊತೆ ವೇದಿಕೆ ಹಂಚಿಕೊಳ್ಳಲು ಬಿಡಲಿಲ್ಲ. ಆದರೆ, ದಾವೋಸ್ ನಲ್ಲಿ ನೀರವ್ ಮೋದಿ ಹೇಗೆ ಪ್ರಧಾನಿ ಜೊತೆಗೆ ಕಾಣಿಸಿಕೊಳ್ಳುವಾಗ ಪ್ರಧಾನಿ  ಕಾರ್ಯಾಲಯ ನಿದ್ದೆ ಮಾಡುತಿತ್ತಾ ಈ  ಬಗ್ಗೆ
ದೇಶಕ್ಕೆ ತಿಳಿಸಬೇಕು ಎಂದು ಶತ್ರುಘ್ನ ಸಿನ್ಹಾ  ಆಗ್ರಹಿಸಿದ್ದಾರೆ.

 ದಾವೋಸ್ ನಲ್ಲಿ ಪ್ರಧಾನಿ ನರೇಂದ್ರಮೋದಿ ವಿವಿಧ ಕಂಪನಿಗಳ ಸಿಇಓ ನಿಯೋಗದೊಂದಿಗೆ ನಡೆಸಿದ ಸಂವಾದದಲ್ಲಿ ನೀರವ್ ಮೋದಿ ಇರುವ ಚಿತ್ರವನ್ನು ವಿದೇಶಾಂಗ ಸಚಿವಾಲಯ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯ ಟ್ವೀಟರ್ ನಲ್ಲಿ ಪ್ರಕಟಿಸಿತ್ತು.

ಭವಿಷ್ಯದ ಭಾರತಕ್ಕಾಗಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಭಾರತೀಯ ಕಂಪನಿಗಳ ಸಿಇಓ ಪರಸ್ಪರ ಕೈ ಜೋಡಿಸಲಿದ್ದಾರೆ ಎಂಬಂತಹ ಹೇಳಿಕೆ ಸಹ ನೀಡಲಾಗಿತ್ತು.



ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com