ರಾಜಸ್ತಾನ: ಹಂದಿಜ್ವರಕ್ಕೆ 88 ಮಂದಿ ಸಾವು, 1000 ಮಂದಿಯಲ್ಲಿ ಸೋಂಕು

ಈ ವರ್ಷ ರಾಜಸ್ತಾನದಲ್ಲಿ ಹೆಚ್ 1ಎನ್1 ಸೋಂಕಿಗೆ 88 ಮಂದಿ ಮೃತಪಟ್ಟು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ್(ರಾಜಸ್ತಾನ): ಈ ವರ್ಷ ರಾಜಸ್ತಾನದಲ್ಲಿ ಹೆಚ್ 1ಎನ್1 ಸೋಂಕಿಗೆ 88 ಮಂದಿ ಮೃತಪಟ್ಟು 976 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ ಜನವರಿ 20ರಂದು ಪ್ರತಿಕ್ರಿಯೆ ನೀಡಿದ್ದ ರಾಜಸ್ತಾನ ಆರೋಗ್ಯ ನಿರ್ದೇಶಕ ವಿ.ಕೆ.ಸಿಂಗ್ ಮಾಥುರ್, ಪರಿಸ್ಥಿತಿಯನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದ್ದು ಸೋಂಕಿನ ವಿರುದ್ಧ ಹೋರಾಡಲು ದಾರಿಗಳನ್ನು ಕಂಡುಹಿಡಿಯಲಾಗುತ್ತದೆ ಎಂದರು.

ಕಳೆದ ಡಿಸೆಂಬರ್ ತಿಂಗಳಲ್ಲಿ 400 ಮಂದಿಯಲ್ಲಿ ಹೆಚ್ 1 ಎನ್ 1 ಸೋಂಕು ತಗುಲಿರುವುದು ಪತ್ತೆಯಾದ ನಂತರ ರಾಜಸ್ತಾನ ಸರ್ಕಾರ ಕಳೆದ ತಿಂಗಳು 3ರಂದು ರಜ್ಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಿತ್ತು. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ಕೂಡ ಏರ್ಪಡಿಸಲಾಯಿತು.

ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ವರದಿ ಪ್ರಕಾರ, 241 ಮಂದಿ ಹಂದಿ  ಜ್ವರಕ್ಕೆ ಮೃತಪಟ್ಟಿದ್ದಾರೆ.

ಕಳೆದ ವರ್ಷ ಜನವರಿಯಿಂದ ಸುಮಾರು 11,721 ಮಂದಿಯಲ್ಲಿ ಹಂದಿ ಜ್ವರ ಕಾಣಿಸಿಕೊಂಡಿದ್ದು ಡಿಸೆಂಬರ್ ವೇಳೆಗೆ 3,214 ಮಂದಿಯಲ್ಲಿ ಹೆಚ್1ಎನ್ 1 ಸೋಂಕು ಕಾಣಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com