ಕಮಲ್ ಹಾಸನ್
ದೇಶ
ಕಮಲ್ ಹಾಸನ್ ಹೊಸ ರಾಜಕೀಯ ಪಕ್ಷ 'ಮಕ್ಕಳ್ ನೀಧಿ ಮಯ್ಯಂ'
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ಬುಧವಾರ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದು, ತಮ್ಮ ನೂತನ ಪಕ್ಷದ ಹೆಸರು ಮಕ್ಕಳ್ ನೀಧಿ ಮೈಯಂ...
ಮಧುರೈ: ದಕ್ಷಿಣ ಭಾರತದ ಖ್ಯಾತ ನಟ ಕಮಲ ಹಾಸನ್ ಅವರು ಬುಧವಾರ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದು, ತಮ್ಮ ನೂತನ ಪಕ್ಷದ ಹೆಸರು ಮಕ್ಕಳ್ ನೀಧಿ ಮೈಯಂ ಎಂದು ಘೋಷಿಸಿದ್ದಾರೆ.
ಇಂದು ಸಂಜೆ ಮಧುರೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ತಮ್ಮ ನೂತನ ಪಕ್ಷದ ಹೆಸರು ಮತ್ತು ಚಿಹ್ನೆ ಒಳಗೊಂಡ ಬಾವುಟವನ್ನು ಅನಾವರಣಗೊಳಿಸಿದರು.
ಮಕ್ಕಳ್ ನೀಧಿ ಮೈಯಂ ಜನಕ್ಕಾಗಿ ನ್ಯಾಯ ಕೇಂದ್ರ ಎನ್ನುವ ಅರ್ಥ ನೀಡುತ್ತದೆ
ಈ ವೇಳೆ ನಿಮ್ಮ ಮುಂದೆ ಭಾಷಣ ಮಾಡುವುದಕ್ಕಿಂತಲೂ ನಿಮ್ಮಿಂದ ಸಲಹೆ ಪಡೆಯುತ್ತೇನೆ. ಈ ಪಕ್ಷ ಜನರಿಗಾಗಿ. ನಾನು ನಾಯಕ ಅಲ್ಲ. ನಿಮ್ಮ ಸೇವಕ ಎಂದು ಕಮಲ್ ಹಾಸನ್ ಹೇಳಿದರು.

