ಕಾರ್ ಖರೀದಿಗಾಗಿ ಪಿಎನ್‌ಬಿಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಸಾಲ, ಪಿಂಚಣಿಯಿಂದ ತೀರಿಸಿದ್ದ ಪತ್ನಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಚಿನ್ನಾಭರಣ ವ್ಯಾಪಾರಿ ನೀರವ್ ಮೋದಿ ಮಾಡಿರುವ ಬಹುಕೋಟಿ ರೂ. ವಂಚನೆ ಪ್ರಕಅಣ ರಾಷ್ತ್ರದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಈ ಸಮಯದಲ್ಲಿ .....
ಲಾಲ್ ಬಹದ್ದೂರ್ ಶಾಸ್ತ್ರಿ
ಲಾಲ್ ಬಹದ್ದೂರ್ ಶಾಸ್ತ್ರಿ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಚಿನ್ನಾಭರಣ ವ್ಯಾಪಾರಿ ನೀರವ್ ಮೋದಿ ಮಾಡಿರುವ ಬಹುಕೋಟಿ ರೂ. ವಂಚನೆ ಪ್ರಕರಣ ರಾಷ್ತ್ರದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಈ ಸಮಯದಲ್ಲಿ ಭಾರತ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸಹ ಪಿಎನ್‌ಬಿಯಿಂದ ಸಾಲ ಪಡೆದಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. 
ಶಾಸ್ತ್ರಿ ಅವರು ಕಾರ್ ಖರೀದಿಗಾಗಿ ಬ್ಯಾಂಕ್ ನಿಂದ 5000 ರೂ. ಸಾಲ ಪಡೆದಿದ್ದರು. ಆ ನಂತರದಲ್ಲಿ ಶಾಸ್ತ್ರಿ ಅವರ ಪತ್ನಿ ಪಿಂಚಣಿ ಹಣದಿಂದ ಆ ಸಾಲವನ್ನು ಮರುಪಾವತಿಸಿದ್ದರು.
1964ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಫಿಯೆಟ್‌ ಕಾರ್ ಖರೀದಿಸಲಾಗಿ ಬ್ಯಾಂಕ್ ನಿಂದ 5000 ರೂ. ಸಾಲ ಪಡೆದಿದ್ದರು. ಆದರೆ 1966ರ ಜ.11ರಂದು ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು . ಆಗ ಬ್ಯಾಂಕ್, ಸಾಲವನ್ನು ತೀರಿಸಬೇಕೆಂದು ಕೋರಿ ಶಾಸ್ತ್ರಿ ಅವರ ಕುಟುಂಬಕ್ಕೆ ಪತ್ರ ಬರೆದಿತ್ತು.  ಪತ್ರ ಕೈಸೇರಿದ ಬಳಿಕ  ಶಾಸ್ತ್ರಿ ಅವರ ಪತ್ನಿ ಲಲಿತಾ ಶಾಸ್ತ್ರಿಯವರು ತಮ್ಮ ಪಿಂಚಣಿ ಹಣ ಬಳಸಿ ಬ್ಯಾಂಕ್ ಸಾಲ ತೀರಿಸಿದ್ದರು.. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com