ವಾಯು ಗಡಿ ಉಲ್ಲಂಘಿಸಿ ಎಲ್ಒಸಿಯಿಂದ 300 ಮೀಟರ್ ಒಳಪ್ರವೇಶಿಸಿದ ಪಾಕ್ ಹೆಲಿಕಾಪ್ಟರ್

ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ 300 ಮೀಟರ್ ಅಂತರದಲ್ಲಿ ಪಾಕ್ ಹೆಲಿಕಾಪ್ಟರ್ ಹಾರಾಟ ನಡೆಸುವ ಮೂಲಕ ವಾಯುಪ್ರದೇಶ ನೀತಿಯನ್ನು ಉಲ್ಲಂಘಿಸಿದೆ.
ಪಾಕಿಸ್ತಾನದ ಹೆಲಿಕಾಪ್ಟರ್ ಚಿತ್ರ
ಪಾಕಿಸ್ತಾನದ ಹೆಲಿಕಾಪ್ಟರ್ ಚಿತ್ರ

ಜಮ್ಮು-ಕಾಶ್ಮೀರ:  ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುವ ಮೂಲಕ ಭಾರತದ ವಿರುದ್ಧ ಕಾಲು ಕೆರೆದುಕೊಂಡು ತಂಟೆ ತೆಗೆಯುತ್ತಿರುವ ಪಾಕಿಸ್ತಾನ ಇಂದು ಮತ್ತೊಂದು ಖ್ಯಾತೆ ತೆಗೆದಿದೆ.

ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕ್ ಹೆಲಿಕಾಪ್ಟರ್ ವೊಂದು  ವಾಯುಪ್ರದೇಶ ಉಲ್ಲಂಘಿಸಿ 300 ಮೀಟರ್ ಒಳಪ್ರವೇಶಿಸಿದೆ.

 ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಉಭಯ ದೇಶಗಳ ರೋಟರಿ ವಿಂಗ್ ವಿಮಾನಗಳು 10 ಕಿಲೋಮೀಟರ್ ಕೆಳಗೆ ಒಳಪ್ರವೇಶಿಸುವಂತಿಲ್ಲ ಎಂಬ ನಿಯಮವಿದೆ.

ಆದರೆ, ಪೊಂಚ್ ವಲಯದ ಗುಲ್ಪುರ್ ವಲಯದಲ್ಲಿ ಇಂದು ಬೆಳಿಗ್ಗೆ 9-45ರ ಸಮಯದಲ್ಲಿ ಎಂ ಐ-17 ಹೆಲಿಕಾಪ್ಟರ್ ನಿಂದ ನಿಯಮ ಉಲ್ಲಂಘಿಸಲಾಗಿದೆ . ಆದರೆ, ಗುಂಡಿನ ದಾಳಿಯಂತಹ ಪ್ರತಿಕೂಲ ಕಾರ್ಯಗಳು ಎರಡು ಕಡೆಯಿಂದಲೂ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com