ಮಾಜಿ ಪ್ರಧಾನಿ ನವಾಜ್ ಷರೀಫ್ ಪಕ್ಷ ಮುನ್ನಡೆಸುವಂತಿಲ್ಲ: ಪಾಕ್ ಸುಪ್ರೀಂ ಕೋರ್ಟ್

ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿರುವ ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಹೇಳಿದೆ.
ನವಾಜ್ ಷರೀಫ್
ನವಾಜ್ ಷರೀಫ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿರುವ ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಧಾನಿ ಹುದ್ದೆಯಿಂದ ನವಾಜ್ ಷರೀಫ್ ಕೆಳಗಿಳಿಯಬೇಕು ಎಂಬ ಆದೇಶ ಹೊರಬಿದ್ದ 6 ತಿಂಗಳಲ್ಲೇ ನವಾಜ್ ಷರೀಫ್ ತಮ್ಮ ಪಕ್ಷದ ನೇತೃತ್ವವನ್ನೂ ವಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನವಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿ ಹುದ್ದೆಕಳೆದುಕೊಳ್ಳುತ್ತಿದ್ದಂತೆಯೇ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷ ನವಾಜ್ ಷರೀಫ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯುವುದಕ್ಕೆ ಯಾವುದೇ ತೊಡಕಾಗದಂತೆ ಕಾನೂನು ಮಾರ್ಪಾಡು ಮಾಡಿತ್ತು. ಆದರೆ ಕೋರ್ಟ್ ಆದೇಶದಿಂದ ಈಗ ನವಾಜ್ ಷರೀಫ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಕುತ್ತು ಬಂದಿದ್ದು ಚುನಾವಣಾ ಆಯೋಗ ನವಾಜ್ ಷರೀಫ್ ಹೆಸರನ್ನು ಪಿಎಂಎಲ್-ಎನ್ ಪಕ್ಷದ ಎಲ್ಲಾ ಅಧಿಕೃತ ದಾಖಲೆಗಳಿಂದಲೂ ಕೈಬಿಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com