ಖಲಿಸ್ತಾನಿ ಉಗ್ರ ಜಸ್ಪಾಲ್ ಅತ್ವಾಲ್ ಗೆ ಆಹ್ವಾನ ಹೋಗಬಾರದಿತ್ತು: ಕೆನಡಾ ಪ್ರಧಾನಿ ಟ್ರೂಡ್ಯೂ

ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂವಿಗೆ ಕೆನಡಾ ಹೈ ಕಮೀಷನರ್ ನಿನ್ನೆ ಆಯೋಜಿಸಿದ್ದ ಔತಣಕೂಟದಲ್ಲಿ ಖಲಿಸ್ತಾನ್ ಉಗ್ರ ಜಸ್ಪಾಲ್ ಅತ್ವಾಲ್ ಪಾಲ್ಗೊಂಡಿರುವ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಚಿತ್ರ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಚಿತ್ರ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂವಿಗೆ ಕೆನಡಾ ಹೈ ಕಮೀಷನರ್ ನಿನ್ನೆ ಆಯೋಜಿಸಿದ್ದ ಔತಣಕೂಟದಲ್ಲಿ ಖಲಿಸ್ತಾನ್ ಉಗ್ರ ಜಸ್ಪಾಲ್ ಅತ್ವಾಲ್  ಪಾಲ್ಗೊಂಡಿರುವ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.

ಈ ಕುರಿತಂತೆ  ಪ್ರತಿಕ್ರಿಯಿಸಿರುವ ಜಸ್ಟಿನ್ ಟ್ರುಡ್ಯೂ, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ತಾವೂ ಅಂತಹ ಆಹ್ವಾನವನ್ನು ನೀಡಿರಲಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಕೆನಡಾ ಸಂಸತ್ತಿನ ಸದಸ್ಯ ರಂದೀಪ್ ಎಸ್, ಸರಾಯ್ ಅತ್ವಾಲ್ ನನ್ನು  ಔತಣಕ್ಕೂ ಆಹ್ವಾನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ತಾವೇ ಅವರನ್ನು ಆಹ್ವಾನಿಸಿರುವುದಾಗಿ ಸಂಪೂರ್ಣ ಹೊಣೆ ಹೊರುವುದಾಗಿ ಸರಾಯ್ ತಿಳಿಸಿದ್ದಾರೆ ಎಂದು ಕೆನಡಾ ಮೂಲದ ಪತ್ರಕರ್ತರೊಬ್ಬರು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಇದು ಹೇಗೆ ನಡೆಯಿತು ಎಂಬ ಬಗ್ಗೆ ತಮಗೆ ಏನೂ ಗೊತ್ತಿಲ್ಲ.
ಉಗ್ರ ಜಸ್ಪಾಲ್ ಅತ್ವಾಲ್ ಹಾಜರಿ ಹಾಗೂ ವೀಸಾದ ಬಗ್ಗೆ ತಿಳಿಯಬೇಕಾಗಿದೆ. ಈ ಸಂಬಂಧ ನಮ್ಮ ಕಮಿಷನ್ ನಿಂದ ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಜಸ್ಪಾಲ್ ಅತ್ವಾಲ್ ಖಲಿಸ್ತಾನ್ ಉಗ್ರನೆಂಬ ಆರೋಪವಿದೆ. ನಿಷೇಧಿತ ಅಂತಾರಾಷ್ಟ್ರೀಯ ಸಿಖ್ ಯುವ ಒಕ್ಕೂಟದಲ್ಲಿ ಆತ ಸಕ್ರೀಯವಾಗಿದ್ದು, ಪಂಜಾಬ್ ಸಚಿವ ಮಲ್ಕಿಯಾತ್ ಸಿಂಗ್ ಸಿಧು ಅವರ ಕೊಲೆಗೆ ಯತ್ನಿಸಿದೆ ಆರೋಪವಿದೆ.

ಕೆನಡಾದಲ್ಲಿನ ಸಿಖ್ ರ ಪ್ರತ್ಯೇಕತೆ ಕುರಿತಂತೆ ಉತ್ತರಿಸುವಂತೆ ಟ್ರೂಡೂ ಮೇಲೆ
ಒತ್ತಡಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com