ದೇಶದ ಬಿಲಿಯನೇರ್ ಗಳ ಸಂಪತ್ತು ಜಿಡಿಪಿಯ ಶೇ.15 ರಷ್ಟಕ್ಕೆ ಸಮ, ಬಡವರಿಗೆ ಮತ್ತಷ್ಟು ಬಡತನ: ಆಕ್ಸ್ಫಾಮ್

ಭಾರತೀಯ ಬಿಲಿಯನೇರ್ ಗಳ ಸಂಪತ್ತು ಜಿಡಿಪಿಯ ಶೇ.15 ರಷ್ಟಕ್ಕೆ ಸಮನಾಗಿದ್ದು ಬಡವರು ಬಡವರಾಗುತ್ತಲೇ ಇದ್ದಾರೆ ಎಂದು ಆಕ್ಸ್ಫಾಮ್ ಇಂಡಿಯಾ ವರದಿ ಪ್ರಕಟಿಸಿದೆ.
ಭಾರತೀಯ ಬಿಲಿಯನೇರ್ ಗಳ ಸಂಪತ್ತು ಜಿಡಿಪಿಯ ಶೇ.15 ರಷ್ಟಕ್ಕೆ ಸಮ, ಬಡವರು ಬಡವರಾಗುತ್ತಲೇ ಇದ್ದಾರೆ: ಆಕ್ಸ್ಫಾಮ್
ಭಾರತೀಯ ಬಿಲಿಯನೇರ್ ಗಳ ಸಂಪತ್ತು ಜಿಡಿಪಿಯ ಶೇ.15 ರಷ್ಟಕ್ಕೆ ಸಮ, ಬಡವರು ಬಡವರಾಗುತ್ತಲೇ ಇದ್ದಾರೆ: ಆಕ್ಸ್ಫಾಮ್
ನವದೆಹಲಿ: ಭಾರತೀಯ ಬಿಲಿಯನೇರ್ ಗಳ ಸಂಪತ್ತು ಜಿಡಿಪಿಯ ಶೇ.15 ರಷ್ಟಕ್ಕೆ ಸಮನಾಗಿದ್ದು ಬಡವರು ಬಡವರಾಗುತ್ತಲೇ ಇದ್ದಾರೆ ಎಂದು ಆಕ್ಸ್ಫಾಮ್ ಇಂಡಿಯಾ ವರದಿ ಪ್ರಕಟಿಸಿದೆ. 
1991 (ಉದಾರೀಕರಣದ ನಂತರ) ದಿಂದಲೂ ಭಾರತದಲ್ಲಿ ಅಸಮಾನತೆ ಹೆಚ್ಚುತ್ತಿದ್ದು, ಆದಾಯ ಹಾಗೂ ಬಳಕೆಯಲ್ಲಿದ್ದ ಅಸಮಾನತೆ ಆದಾಯೇತರ ವಿಷಯಗಳಾದ ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ, ನೈರ್ಮಲ್ಯ, ಅವಕಾಶಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಹ ಅಸಮಾನತೆ ಹೆಚ್ಚುತ್ತಿದೆ ಎಂದು ಆಕ್ಸ್ಫಾಮ್ ಇಂಡಿಯಾ ವರದಿಯ ಮೂಲಕ ತಿಳಿದುಬಂದಿದೆ. 
ಇದೇ ವೇಳೆ ದಲಿತರು, ಬುಡಕಟ್ಟು ಜನಾಂಗ, ಮುಸ್ಲಿಮರ ಆರ್ಥಿಕ ಸ್ಥಿತಿಗತಿಗಳಲ್ಲಿ ಸುಧಾರಣೆ ಆಗಿಲ್ಲ ಎಂದು ಫೋರ್ಬ್ಸ್ ಡಾಟಾವನ್ನು ಉಲ್ಲೇಖಿಸಿರುವ ಆಕ್ಸ್ಫಾಮ್ ತಿಳಿಸಿದೆ. 
ಭಾರತದ ಬಿಲಿಯನೇರ್ ಗಳ ಕೈಲಿದ್ದ ಸಂಪತ್ತು ಒಂದು ದಶಕದಲ್ಲಿ 10 ಪಟ್ಟು ಹೆಚ್ಚಾಗಿದ್ದು, 100 ಕ್ಕೂ ಕಡಿಮೆಯಿರುವ ಬಿಲಿಯನೇರ್ ಗಳು ದೇಶದ ಜಿಡಿಪಿಯ ಶೇ.15 ರಷ್ಟಕ್ಕೆ ಸಮನಾದ ಸಂಪತ್ತನ್ನು ಹೊಂದಿದ್ದಾರೆ ಭಾರತದ 10 ಬಿಲಿಯನೇರ್ ಗಳ ಪೈಕಿ 4 ಜನರು ಆನುವಂಶಿಕವಾಗಿ ಸಂಪತ್ತು ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com