ಸಾರಿಗೆಯಿಂದ ಪರಿವರ್ತನೆ ಈಶಾನ್ಯ ಭಾಗಗಳಿಗೆ ನಮ್ಮ ದೃಷ್ಟಿಕೋನ: ಪ್ರಧಾನಿ ಮೋದಿ

ಸಾರಿಗೆಯಿಂದ ಪರಿವರ್ತನೆಯೆಡೆಗೆ ಈಶಾನ್ಯ ಭಾಗಗಳ ಅಭಿವೃದ್ಧಿಗೆ ತಮ್ಮ ದೃಷ್ಟಿಕೋನವಾಗಿದೆ ....
ತುಯೆನ್ಸಾಂಗ್ ನಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ತುಯೆನ್ಸಾಂಗ್ ನಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ತುಯೆನ್ಸಾಂಗ್ (ನಾಗಲ್ಯಾಂಡ್): ಸಾರಿಗೆಯಿಂದ ಪರಿವರ್ತನೆಯೆಡೆಗೆ ಈಶಾನ್ಯ ಭಾಗಗಳ ಅಭಿವೃದ್ಧಿಗೆ ತಮ್ಮ ದೃಷ್ಟಿಕೋನವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಚುನಾವಣೆಯಿರುವ ನಾಗಲ್ಯಾಂಡ್ ಗೆ ಸಾರ್ವಜನಿಕ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇಲ್ಲಿ ತುಯೆನ್ಸಾಂಗ್  ನಲ್ಲಿ ನನ್ನ ಕಣ್ಣ ಮುಂದೆ ಏಕ ಭಾರತ, ಸ್ವಚ್ಛ ಭಾರತದ ಚಿತ್ರಣ ಬರುತ್ತಿದೆ.ಸಾರಿಗೆಯಿಂದ ಪರಿವರ್ತನೆಯೆಡೆಗೆ ಈಶಾನ್ಯ ಭಾಗಗಳ ಅಭಿವೃದ್ಧಿ ನನ್ನ ದೃಷ್ಟಿಕೋನವಾಗಿದೆ. ನಾಗಲ್ಯಾಂಡ್ ನಲ್ಲಿ ಸಂಪರ್ಕ ಸಾಧಿಸುವುದು ಬಹುದೊಡ್ಡ ಸವಾಲಾಗಿದ್ದು ಅದನ್ನು ಹೊಡೆದೋಡಿಸುವತ್ತ ನಾವು ನಿರಂತರ ಪ್ರಯತ್ನ  ಮಾಡುತ್ತೇವೆ ಎಂದು ಹೇಳಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ 500 ಕಿಲೋ ಮೀಟರ್ ಗಳ ರಾಷ್ಟ್ರೀಯ ಹೆದ್ದಾರಿಯನ್ನು ಸೇರಿಸಿದೆ.ನಾಗಲ್ಯಾಂಡ್ ಗಳ ರಸ್ತೆಗಳ ಅಭಿವೃದ್ಧಿಗೆ 10,000 ಕೋಟಿ ರೂಪಾಯಿಗಳಿಗಿಂತಲೂ  ಹೆಚ್ಚು ವಿನಿಯೋಗಿಸಿದ್ದೇವೆ. ಈಶಾನ್ಯ ಭಾಗಗಳ ಅಭಿವೃದ್ಧಿಗೆ ಎನ್ ಡಿಎ ಸರ್ಕಾರ  ವಿಶೇಷ ಆದ್ಯತೆ ನೀಡುತ್ತಿದೆ. ಇನ್ನಷ್ಟು ಸಮೃದ್ಧಗೊಳಿಸಲು ನಾವು ಪ್ರಯತ್ನಪಡುತ್ತೇವೆ ಎಂದು ಪ್ರಧಾನಿ ಹೇಳಿದರು.

ವೈವಿಧ್ಯತೆಗೆ ಹೆಸರಾಗಿರುವ ಭಾರತದ ನಾಗಲ್ಯಾಂಡ್ ಗೆ ನೀವು ಕಾಲಿಟ್ಟರೆ ಏಕತೆಯನ್ನು ಕಾಣಬಹುದು. ಇಲ್ಲಿ ವೋಟು ಬ್ಯಾಂಕು ರಾಜಕೀಯದಾಟವನ್ನು ಆಡುವವರಿಗೆ ನೀವು ಸರಿಯಾದ ಉತ್ತರ ಕೊಟ್ಟಿದ್ದೀರಿ. ಇಂದಿನ ರ್ಯಾಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುವುದೇ ಸಾಕ್ಷಿ ಎಂದು ಪ್ರಧಾನಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com