
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನ 11. 400 ಕೋಟಿ ರೂ . ಹಗರಣದಿಂದ ಎಚ್ಚೆತ್ತುಕೊಂಡಿರುವ ಕೇಂದ್ರಸರ್ಕಾರ ಕಂಪನಿ ಕಾಯ್ದೆ 2013 ಸೆಕ್ಷನ್ 132 ರ ಅನ್ವಯ ಮಾನದಂಡ ಅನುಷ್ಠಾನಗೊಳಿಸುವ ಮೂಲಕ ತಪ್ಪೆಸಗುವ ಅಡಿಟರ್ ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ ರಚಿಸಿ, ಅಡ್ಡದಾರಿ ಹಿಡಿದಿರುವ ಅಡಿಟರ್ ಹಾಗೂ ಅಕ್ರಮ ವ್ಯವಹಾರವನ್ನು ನಿಯಂತ್ರಿಸುವ ಅಧಿಕಾರ ನೀಡಲಾಗುತ್ತಿದೆ.
1949ರ ಚಾರ್ಟಡ್ ಅಕೌಂಟ್ಸ್ ಕಾಯ್ದೆ ಪ್ರಕಾರ ಕೆಲ ವಿನಾಯಿತಿ ನೀಡಲಾಗಿದ್ದು,ಭ್ರಷ್ಟಾಚಾರ ಅಥವಾ ತಪ್ಪು ಆದಂತಹ ಸಂದರ್ಭದಲ್ಲಿ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ನೋಟ್ ಅಮಾನ್ಯೀಕರಣ ವೇಳೆಯಲ್ಲಿ ತಪ್ಪೆಸಗಿದ ಐವರು ಚಾರ್ಟರ್ಡ್ ಅಕೌಂಟೆಂಟ್ಸ್ ಗಳಿಗೆ 1 ಲಕ್ಷ ರೂ. ದಂಡ ವಿಧಿಸಿ ಮೂರು ತಿಂಗಳ ಕಾಲ ಸೇವೆಯಿಂದ ಅಮಾನತು ಮಾಡಲಾಗಿತ್ತು.ಹೀಗೆ ಭ್ರಷ್ಟ ಅಧಿಕಾರಿಯನ್ನು ಆರರಿಂದ 10 ತಿಂಗಳ ಕಾಲ ಸೇವೆಯಿಂದ ಅಮಾನತುಗೊಳಿಸುವ ಅಧಿಕಾರವನ್ನು ಸೆಕ್ಷನ್ 132 ನೀಡಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚನೆವೆಸುವ ವಿರುದ್ಧ ರಾಜ್ಯಸರ್ಕಾರಗಳು ಕ್ರಮ ಕೈಗೊಳ್ಳಬಹುದಾಗಿದೆ. ಬ್ಯಾಂಕ್ ನಿರ್ವಹಣಾ ಸಂಸ್ಥೆಗೆ ರಾಜ್ಯಸರ್ಕಾರಗಳು ಸ್ವಾಯತ್ತ ನೀಡುವುದರೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಯಾರು ಬ್ಯಾಂಕಿಂಗ್ ಅವ್ಯವಹಾರದಲ್ಲಿ ಭಾಗಿಯಾಗಿದರೂ ಅಂತಹವರ ಮೇಲೆ ಮೇಲ್ವಿಚಾರಣಾ ಸಮಿತಿಗಳು ಹೊಸ ಕ್ರಮ ಅನುಸರಿಸಬಹುದು ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಅಡ್ಡದಾರಿ ಹಿಡಿದಿರುವ ಅಡಿಟರ್ ಗಳನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ. ಚಾರ್ಟೆಡ್ ಅಕೌಂಟೆಂಟ್ ವೃತ್ತಿ ಆತ್ಮವಿಶ್ವಾಸದ ವೃತ್ತಿಯಾಗಿದ್ದು, ಮೇಲ್ವಿಚಾರಣಾ ಸಮಿತಿಗಲು ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
Advertisement