ಭಾರತೀಯ ನೌಕಾದಳ ನಡೆಸಿದ ಧನುಷ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭಾರತೀಯ ನೌಕಾದಳ ನಡೆಸಿದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಕಡಿಮೆ ದೂರ ವ್ಯಾಪ್ತಿಯ ಧನುಷ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ...
ಧನುಷ್
ಧನುಷ್
ಭುವನೇಶ್ವರ್: ಭಾರತೀಯ ನೌಕಾದಳ ನಡೆಸಿದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಕಡಿಮೆ ದೂರ ವ್ಯಾಪ್ತಿಯ ಧನುಷ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. 
ನೌಕಾದಳದ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್(ಎಸ್ಎಫ್ಸಿ) ಇಂದು ಬೆಳಗ್ಗೆ 10.52ರ ಸುಮಾರಿಗೆ ಕ್ಷಿಪಣಿಯನ್ನು ಪ್ಯಾರದೀಪ್ ಕಡಲ ತೀರದಲ್ಲಿ ನೌಕೆಯೊಂದರ ಮೂಲಕ ಉಡಾವಣೆ ಮಾಡಿತು. 
500 ಕೆಜಿ ಭಾರದ ಅಣ್ವಸ್ತ್ರಗಳನ್ನು ಹೊತ್ತು ಸುಮಾರು 350 ಕಿ.ಮೀ ದೂರ ಕ್ರಮಿಸಬಲ್ಲ ಧನುಷ್ ಕ್ಷಿಪಣಿಯ ಪರೀಕ್ಷಾರ್ಥ ಉಡ್ಡಯನ ಯಶಸ್ವಿಯಾಗದೆ. ಉಡಾವಣೆಯ ಎಲ್ಲ ಉದ್ದೇಶಗಳನ್ನು ಕ್ಷಿಪಣಿ ಕರಾರುವಕ್ಕಾಗಿ ಪೂರೈಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com