ಶ್ರೀನಗರ: ಸರ್ವೀಸ್ ರಿವಾಲ್ವರ್ ನಿಂದ ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿರುವ ಘಟವೆ ಕಾಶ್ಮೀರದ ಸೋಫಿಯಾನ್ ನಲ್ಲಿ ನಡೆದಿದೆ.
ಝೈನಾಪುರ ಪೊಲೀಸ್ ಠಾಣೆ ಎಸ್ ಪಿಐ ಮಹಮದ್ ಅಮೀರ್ ಗಾಯಗೊಂಡಿದ್ದು, ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಲು ಎಸ್ ಪಿಒ ಗಳನ್ನು ನಿಯೋಜಿಸಿ ತಿಂಗಳಿಗೆ ಇಷ್ಟು ಹಣ ಎಂದು ಪ್ಯಾಕೇಜ್ ರೂಪದಲ್ಲಿ ವೇತನ ನೀಡಲಾಗುತ್ತದೆ.
ಉಗ್ರರ ವಿರುದ್ಧ ಹೋರಾಟಕ್ಕೆ ನೇಮಿಸುವ ಈ ವಿಶೇಷ ಪೊಲೀಸ್ ಅಧಿಕಾರಿಗಳಿಗೆ ಪೇದೆಗಳಿಗಿಂತಲೂ ಕಡಿಮೆ ಸಂಬಳ ನೀಡಲಾಗುತ್ತದೆ,
ಜೊತೆಗೆ ಇವರಿಗೆ ಶಸ್ತ್ರ ಬಳಸುವ ತರಬೇತು ನಿಡಿರುವುದಿಲ್ಲ, ಹೀಗಾಗಿ ಅವರಿಗೆ ನಿರ್ವಹಣ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ.