ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ ಮಧ್ಯ ಪ್ರದೇಶ ಸೈನಿಕ ಕುಟುಂಬಕ್ಕೆ 1 ಕೋಟಿ ರೂ, ಮುಖ್ಯಮಂತ್ರಿ ಚೌಹಾಣ್ ಘೋಷಣೆ

ಕರ್ತವ್ಯ ನಿರತರಾಗಿದ್ದ ವೇಳೆ ಹುತಾತ್ಮರಾದ ರಾಜ್ಯದ ಪ್ರತಿ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ವಿತರಿಸುವುದಾಗಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
ಮೊರೇನಾ(ಮಧ್ಯ ಪ್ರದೇಶ): ಕರ್ತವ್ಯ ನಿರತರಾಗಿದ್ದ ವೇಳೆ ಹುತಾತ್ಮರಾದ ರಾಜ್ಯದ ಪ್ರತಿ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ವಿತರಿಸುವುದಾಗಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
"ರಾಷ್ಟ್ರದ ಗಡಿ ಕಾಯುತ್ತಿರುವಾಗ ತನ್ನ ಪ್ರಾಣ ತ್ಯಾಗ ಮಾಡುವ ಯಾವುದೇ ಮಧ್ಯ ಪ್ರದೇಶದ ಸೈನಿಕನ ಕುಟುಂಬಕ್ಕೆ ರಾಜ್ಯ ಸರ್ಕಾರ ಒಂದು ಕೋಟಿ ನೀಡಲಿದೆ. ಅಲ್ಲದೆ ಸೈನಿಕನ ಪೋಷಕರಿಗೆ ಮಾಸಿಕ ಐದು ಸಾವಿರ ರೂ. ಪಿಂಚಣಿ ಹಾಗೂ ಕುಟುಂಬದಲ್ಲಿ ಓರ್ವ ವ್ಯಕ್ತಿಗೆ  ಉದ್ಯೋಗ ಒದಗಿಸಲಿದೆ" ಚೌಹಾಣ್ ಹೇಳಿದ್ದಾರೆ. 
ಮೊರೇನಾದಲ್ಲಿ ಆಯೋಜಿಸಲಾಗಿದ್ದ ಹುತಾತ್ಮರ ಸ್ಮಾರಕ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. 
"ಮೊರೇನಾ ಹಾಗೂ ಅದರ ಅಕ್ಕಪಕ್ಕದ ಭಾಗದ ಯುವಕರು ಯಾವಾಗಲೂ ಭಾರತ ಮಾತೆಯ ರಕ್ಷಣೆಗೆ ಸದಾ ಮುಂದಿರುತ್ತಾರೆ ಎಂದ ಚೌಹಾಣ್ ಸೇನಾಧಿಕಾರಿಗಳು, ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಮಧ್ಯ ಪ್ರದೇಶದ ಮೂಲದ ಯುವಕರನ್ನು ಶ್ಲಾಘಿಸಿದ್ದಾರೆ.
ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com