ಮಹಾದಾಯಿ ವಿಚಾರದಲ್ಲಿ ಅಮಿತ್ ಶಾ ಕಾಂಗರೂ ಕೋರ್ಟ್ ನಂತೆ ವರ್ತಿಸುತ್ತಿದ್ದಾರೆ: ಶಿವಸೇನೆ

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದಶಕಗಳಿಂದ ಇತ್ಯರ್ಥವಾಗದ ಮಹದಾಯಿ ವಿವಾದ ಬಗೆಹರಿಸುವುದಾಗಿ...
ಅಮಿತ್ ಶಾ
ಅಮಿತ್ ಶಾ
ಪಣಜಿ: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದಶಕಗಳಿಂದ ಇತ್ಯರ್ಥವಾಗದ ಮಹದಾಯಿ ವಿವಾದ ಬಗೆಹರಿಸುವುದಾಗಿ ಹೇಳಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಮಿತ್ರ ಪಕ್ಷ ಶಿವಸೇನೆ ವಾಗ್ದಾಳಿ ನಡೆಸಿದ್ದು, ಬಿಜೆಪಿ ಅಧ್ಯಕ್ಷರು ಕಾಂಗರೂ ಕೋರ್ಟ್(ನೀತಿ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದಂತೆ ವಿಚಾರಣೆ ಮಾಡುವುದು)ನಂತೆ ವರ್ತಿಸುತ್ತಿದ್ದಾರೆ ಎಂದು ಮಂಗಳವಾರ ಕಿಡಿಕಾರಿದೆ.
ಅಮಿತ್ ಶಾ ಹೇಳಿಕೆ ಸಂಪೂರ್ಣ ಗೋವಾ ಜನತೆಯ ವಿರುದ್ಧವಾಗಿದ್ದು, ಅವರು ಕಾಂಗರೂ ಕೋರ್ಟ್ ರೀತಿ ವರ್ತಿಸುತ್ತಿದ್ದಾರೆ ಮತ್ತು ಯಾರನ್ನೂ ಗಮನಕ್ಕೆ ತೆಗೆದುಕೊಳ್ಳದೇ ತೀರ್ಪು ನೀಡುತ್ತಿದ್ದಾರೆ ಎಂದು ಶಿವಸೇನೆಯ ಗೋವಾ ಘಟಕ ಆರೋಪಿಸಿದೆ.
ಗೋವಾ ಮತ್ತು ಕರ್ನಾಟಕ ನಡುವಿನ ವಿವಾದ ಬಗೆಹರಿಸುವ ಅಧಿಕಾರ ಗುಜರಾತ್ ನ ಅಮಿತ್ ಶಾಗೆ ನೀಡಿದವರು ಯಾರು?  ನಮ್ಮ ನೀರಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅವರು ಯಾರು? ಎಂದು ಶಿವಸೇನೆ ವಕ್ತಾರೆ ರಾಖಿ ಪ್ರಭುದೇಸಾಯಿ ನಾಯಕ್ ಅವರು ಪ್ರಶ್ನಿಸಿದ್ದಾರೆ.
ಮಹಾದಾಯಿ ವಿವಾದ ನ್ಯಾಯಾಧೀಕರಣದಲ್ಲಿರುಬೇಕಾದರೆ ಅಮತ್ ಶಾ ಹೇಗೆ ಕಾಂಗರೂ ಕೋರ್ಟ್ ರೀತಿ ತೀರ್ಪು ನೀಡುತ್ತಾರೆ ಎಂದು ನಾಯಕ್ ಪ್ರಶ್ನಿಸಿದ್ದಾರೆ.
ನಿನ್ನೆಯಷ್ಟೇ ಅಮಿತ್ ಶಾ ಅವರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರ ಮಹಾದಾಯಿ ವಿವಾದ ಪರಿಹರಿಸುವುದಾಗಿ ಭರವಸೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com