ಹಿಟ್ ಅಂಡ್ ರನ್ ಕೇಸ್: ಬಿಜೆಪಿ ಮುಖಂಡನ ವಿರುದ್ಧ ಬಿಹಾರದಲ್ಲಿ ಪ್ರತಿಭಟನೆ

ಮುಜಾರಪುರ್ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ವಿರೋಧ ಪಕ್ಷಗಳು ಬಿಹಾರ ವಿಧಾನಸಭೆ ಹೊರಭಾಗ ಪ್ರತಿಭಟನೆ ನಡೆಸಿದವು....
ಬಿಜೆಪಿ ಮುುಖಂಡನ ವಿರುದ್ಧ ಪ್ರತಿಭಟನೆ
ಬಿಜೆಪಿ ಮುುಖಂಡನ ವಿರುದ್ಧ ಪ್ರತಿಭಟನೆ
Updated on
ಪಾಟ್ನಾ: ಮುಜಾರಪುರ್ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ವಿರೋಧ ಪಕ್ಷಗಳು ಬಿಹಾರ ವಿಧಾನಸಭೆ ಹೊರಭಾಗ ಪ್ರತಿಭಟನೆ ನಡೆಸಿದವು.
ಬಿಜೆಪಿ ಮುಖಂಡ ಮನೋಜ್ ಬೈತಾ ಅವರ ವಾಹನ ಶಾಲೆಯೊಂದಕ್ಕೆ ನುಗ್ಗಿ 9 ಮಕ್ಕಳು ಸಾವನ್ನಪ್ಪಿದ್ದವು,  ಈ ಸಂಬಂಧ ಬೈತಾ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. 
ಇದುವರೆಗೂ ಮನೋಜಾ ಬೈತಾ ರನ್ನು ಬಂಧಿಸಿಲ್ಲ ಏಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ,  ಬೈತಾ ಪೊಲೀಸರ ಮುಂದೆ ಶರಣಾಗುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು, ಆದರೆ ಇದುವರೆಗೂ ಯಾವುದೂ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಆತ ನೇಪಾಳಕ್ಕೆ ಓಡಿಹೋಗಿದ್ದಾನೆಯೇ? ಈ ಸಂಬಂಧ ಸಿಎಂ ನಿತೀಶ್ ಕುಮಾರ್ ಮತ್ತು ಡಿಸಿಎಂ ಸುಶೀಲ್ ಮೋದಿ  ಇದುವರೆಗೂ ಈ ಬಗ್ಗೆ ಎಲ್ಲಿಯೀ ಮಾತನಾಡಿಲ್ಲ, ಆತನನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಫೆಬ್ರವರಿ 26 ರಂದು ಬಿಜೆಪಿ ನಾಯಕನ ಕಾರು ಶಾಲೆಯೊಂದಕ್ಕೆ ನುಗ್ಗೆ ಸುಮಾರು 9 ಮಕ್ಕಳು ಮೃತಪಟ್ಟು 20 ಮಕ್ಕಳು ಗಾಯಗೊಂಡಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com