ಫೆ.28 ರ ಸಭೆ ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ದಿನಾಂಕವನ್ನು ಅಂತಿಮಗೊಳಿಸಲು ಉದ್ದೇಶಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದ್ದು, ದೆಹಲಿ ಸರ್ಕಾರಿ ನೌಕರರು ಬಜೆಟ್ ಅಧಿವೇಶನಕ್ಕಾಗಿ ಹುರುಪಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಚರ್ಚಿಸಲು ನಡೆಸಲು ನಾನು ಮತ್ತು ನನ್ನ ಸಹೋದ್ಯೋಗಿಗಳು ಸಭೆಗೆ ಬರುತ್ತಿದ್ದೇವೆ, ಅಲ್ಲಿ ಹಲ್ಲೆ ನಡೆಸುವುದಿಲ್ಲ ಎಂಬ ವಿಶ್ವಾಸದಿಂದ ಸಭೆಗೆ ಬರುತ್ತಿದ್ದೇವೆ ಎಂದು ಮುಖ್ಯ ಕಾರ್ಯದರ್ಶಿ ಅನ್ಶು ಪ್ರಕಾಶ್ ಹೇಳಿದ್ದಾರೆ.