10ನೇ ತರಗತಿ ತೇರ್ಗಡೆಗೆ ಒಂದು ಬಾರಿ ಶೇಕಡಾ 33ರ ವಿನಾಯ್ತಿ ನೀಡಿದ ಸಿಬಿಎಸ್ ಇ

ಮುಂದಿನ ವಾರ 10ನೇ ತರಗತಿ ಪರೀಕ್ಷೆ ಬರೆಯಲಿರುವ ಸಿಬಿಎಸ್ ಇ ವಿದ್ಯಾರ್ಥಿಗಳಿಗೆ ಬಹುದೊಡ್ಡ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮುಂದಿನ ವಾರ 10ನೇ ತರಗತಿ ಪರೀಕ್ಷೆ ಬರೆಯಲಿರುವ ಸಿಬಿಎಸ್ ಇ ವಿದ್ಯಾರ್ಥಿಗಳಿಗೆ ಬಹುದೊಡ್ಡ ನಿರಾಳತೆ ನೀಡಿರುವ ಮಂಡಳಿ ತೇರ್ಗಡೆ ಅಂಕಗಳಲ್ಲಿ ಒಂದು ಸಲಕ್ಕೆ ವಿನಾಯ್ತಿ ನೀಡಲು ಮುಂದಾಗಿದೆ.

ಈ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ತೇರ್ಗಡೆಯ ಒಟ್ಟಾರೆ ಶೇಕಡಾವಾರು ಪ್ರಮಾಣವನ್ನು 33ಕ್ಕೆ ನಿಗದಿಪಡಿಸಿ ಜಾರಿಗೆ ತರಲು ನಿರ್ಧರಿಸಿದೆ. ಮಂಡಳಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಮತ್ತು ಇಂಟರ್ನಲ್ ಅಸೆಸ್ ಮೆಂಟ್ ನಲ್ಲಿ ಶೇಕಡಾ 33ರಷ್ಟು ತೆಗೆಯಬೇಕಾಗಿಲ್ಲ.

9ನೇ ತರಗತಿಯಲ್ಲಿರುವಾಗ ವಿವಿಧ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಈ ವರ್ಷ ಇರುವುದರಿಂದ ಈ ವರ್ಷದ ಬ್ಯಾಚ್ ನಲ್ಲಿ ಕಷ್ಟವಾಗುತ್ತದೆ ಎಂದು ಫೆಬ್ರವರಿ 16ರಂದು ನಡೆದ ಸಭೆಯಲ್ಲಿ ಪರೀಕ್ಷಾ ಸಮಿತಿ ಈ ನಿರ್ಧಾರ ಕೈಗೊಂಡಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಹೊಸ ವಿನಾಯ್ತಿ ಪ್ರಕಾರ, 10ನೇ ತರಗತಿ ವಿದ್ಯಾರ್ಥಿ ತೇರ್ಗಡೆಯಾಗಲು ಶೇಕಡಾ 33ರಷ್ಟು ಅಂಕ ಗಳಿಸಿದರೆ ಸಾಕು. ಈ ಹಿಂದೆ ವಿದ್ಯಾರ್ಥಿ ತೇರ್ಗಡೆ ಹೊಂದಬೇಕೆಂದರೆ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 33ರಷ್ಟು ಮತ್ತು ಇಂಟರ್ನಲ್ ಅಸೆಸ್ ಮೆಂಟ್ ನಲ್ಲಿ ಶೇಕಡಾ 33ರಷ್ಟು ಅಂಕ ಗಳಿಸಬೇಕು. ಏಳು ವರ್ಷಗಳ ನಂತರ 10ನೇ ತರಗತಿ ಪರೀಕ್ಷೆ ಕಡ್ಡಾಯ ಎಂದು ಮಂಡಳಿ ಹೇಳಿದೆ.

2010-11ರಿಂದ ಮಾನವ ಸಂಪನ್ಮೂಲ ಸಚಿವಾಲಯ ಮಂಡಳಿ ಪರೀಕ್ಷೆಯನ್ನು ಐಚ್ಚಿಕವೆಂದು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com