ಹೋಲಿ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆಯಿಂದ 500 ವಿಶೇಷ ರೈಲುಗಳ ಸೌಲಭ್ಯ

ಹೋಲಿ ದಿನದಂದು ಪ್ರಯಾಣ ದಟ್ಟಣೆಯನ್ನು ತಡೆಗಟ್ಟುವುದಕ್ಕಾಗಿ ರೈಲ್ವೆ ಇಲಾಖೆ 500 ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ಭಾರತೀಯ ರೈಲ್ವೆ ಇಲಾಖೆ
ಭಾರತೀಯ ರೈಲ್ವೆ ಇಲಾಖೆ
ನವದೆಹಲಿ: ಹೋಲಿ ದಿನದಂದು ಪ್ರಯಾಣ ದಟ್ಟಣೆಯನ್ನು ತಡೆಗಟ್ಟುವುದಕ್ಕಾಗಿ ರೈಲ್ವೆ ಇಲಾಖೆ 500 ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ದೆಹಲಿಯಿಂದ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಹಾಗೂ ಉತ್ತರ ಪ್ರದೇಶಗಳಿಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದ್ದು ಮಾ.02 ರಂದು ಹೋಲಿ ಹಬ್ಬ ಆಚರಣೆ ಮಾಡಲಾಗುತ್ತದೆ.  ಇದೇ ವೇಳೇ 54 ವಿಶೇಶ ರೈಲುಗಳ ಸೌಲಭ್ಯ ಕಲ್ಪಿಸುವುದಾಗಿ ಈಶಾನ್ಯ ರೈಲ್ವೆ ಸಹ ಹೇಳಿದ್ದು. 
ರೈಲ್ವೆ ಇಲಾಖೆ ಕಳೆದ ವರ್ಷದ ಹೋಲಿಗೆ ಹೋಲಿಸಿದರೆ ಈ ಬಾರಿ 60 ಹೆಚ್ಚುವರಿ ರೈಲುಗಳ ಸಂಚಾರವನ್ನು ಕಲ್ಪಿಸಿದೆ. ಕಳೆದ ವರ್ಷ 440 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com