ರಾಮಜನ್ಮಭೂಮಿ ಸೇರಿ ಒಂಭತ್ತು ವಿವಾದಿತ ಸ್ಥಳಗಳನ್ನು ಹಿಂದೂಗಳಿಗೆ ಮರಳಿಸಿ: ಶಿಯಾ ವಕ್ಫ್ ಬೋರ್ಡ್

ಹಿಂದೂ ದೇವಾಲಯಗಳನ್ನು ನಾಶಪಡಿಸಿ ಅದರ ಮೇಲೆ ಕಟ್ಟಲಾದ ಮಸೀದಿಗಳನ್ನು ಹಿಂದೂಗಳಿಗೆ ಹಿಂತಿರುಗಿಸಬೇಕು ಎಂದು ಉತ್ತರ ಪ್ರದೇಶದ........
ರಾಮಜನ್ಮಭೂಮಿ ಸೇರಿ ಒಂಭತ್ತು ವಿವಾದಿತ ಸ್ಥಳಗಳನ್ನು ಹಿಂದೂಗಳಿಗೆ ಮರಳಿಸಿ: ಶಿಯಾ ವಕ್ಫ್ ಬೋರ್ಡ್
ರಾಮಜನ್ಮಭೂಮಿ ಸೇರಿ ಒಂಭತ್ತು ವಿವಾದಿತ ಸ್ಥಳಗಳನ್ನು ಹಿಂದೂಗಳಿಗೆ ಮರಳಿಸಿ: ಶಿಯಾ ವಕ್ಫ್ ಬೋರ್ಡ್
ಲಖನೌ(ಉತ್ತರ ಪ್ರದೇಶ): ಹಿಂದೂ ದೇವಾಲಯಗಳನ್ನು ನಾಶಪಡಿಸಿ ಅದರ ಮೇಲೆ ಕಟ್ಟಲಾದ ಮಸೀದಿಗಳನ್ನು ಹಿಂದೂಗಳಿಗೆ ಹಿಂತಿರುಗಿಸಬೇಕು ಎಂದು  ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಸೀಮ್ ರಿಜ್ವಿ ಹೇಳಿದ್ದಾರೆ.
ಅಯೋಧ್ಯಾದ ರಾಮಜನ್ಮಭೂಮಿ ಸೇರಿ ಒಟ್ಟು ಒಂಭತ್ತು ವಿವಾದಿತ ಪ್ರದೇಶಗಳನ್ನು ಹಿಂದೂಗಳಿಗೆ ಮರಳಿಸಬೇಕೆಂದು ಮುಸ್ಲಿಂ ಬೋರ್ಡ್ ಗೆ ಒತ್ತಾಯಿಸಿದ್ದಾರೆ. ಅವರು ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಐಪಿಪಿಬಿ) ಅಧ್ಯಕ್ಷ ಮೌಲಾನಾ ರಾಬಿ ಹಸನ್ ನಾದ್ವಿ ಅವರಿಗೆ ಬರೆದ ಪತ್ರದಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದ್ದಾರೆ.
ಇತರರ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ ಮಸೀದಿ ನಿರ್ಮಣ ಮಾಡುವುದು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂಡು ರಿಜ್ವಿ ಅಭಿಪ್ರಾಯ ಪಟ್ಟಿದ್ದಾರೆ. ರಿಜ್ವಿ ತಮ್ಮ ಪತ್ರದಲ್ಲಿ ದೇಶದಾದ್ಯಂತ ಇರುವ ಒಂಭತ್ತು ಧಾರ್ಮಿಕ ವಿವಾದಾತ್ಮಕ ಸ್ಥಳಗಳ ಹೆಸರನ್ನು ಪಟ್ಟಿ ಮಾಡಿದ್ದಾರೆ.
ಅಯೋಧ್ಯಾದ ಬಾಬರಿ ಮಸೀದಿ, ಮಥುರಾದ ಕೇಶವ ಮಂದಿರ, ವಾರಣಾಸಿಯ ವಿಶ್ವನಾಥ ದೇವಾಲಯ, ಜೌನ್ ಪುರದಲ್ಲಿನ ಅಟಲ್  ದೇವ ಮಂದಿರ, ಗುಜರಾತಿನ ಭಾತ್ನಾದ ರುದ್ರ ಮಹಾಲಯ ಮಂದಿರ, ಅಹಮದಾಬಾದ್ ನ ಭದ್ರಕಾಳಿ ಮಂದಿರ, ಪಶ್ಚಿಮ ಬಂಗಾಳದ ಪಾಂಡುವಾದಲ್ಲಿನ ಅದೀನಾ ಮಸೀದಿ, ಮಧ್ಯ ಪ್ರದೇಶದ ವಿದಿಷಾದ ವಿಜಯಾ ದೇವಿ ಮಂದಿರ ಮತ್ತು ದೆಹಲಿಯ ಕುತುಬ್ ಮಿನಾರ್ ಮಸೀದಿಗಳನ್ನು ಹಿಂದುಗಳಿಗೆ ಹಸ್ತಾಂತರಿಸಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಅಯೋಧ್ಯೆಯ ಒಂಭತ್ತು ಮಸೀದಿಗಳು ಮೊಘಲರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಇದೆಲ್ಲವೂ ಹಿಂದೂ ದೇವಾಲಯಗಳನ್ನು ನಾಶಗೊಳಿಸಿ ನಿರ್ಮಾಣ ಆಗಿವೆ. ಇಷ್ಟಕ್ಕೂ ಇದು ಮುಸ್ಲೀಂ ಕಾನೂನಿ ರಿತಿಯಾಗಿ ನ್ಯಾಯಸಮ್ಮತವಾಗಿದೆಯೆ ಎಂದು ನಾನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಗೆ ಕೇಲಲು ಬಯಸುತ್ತೇನೆ ಎಂದು .ರಿಜ್ವಿ ಎಎನ್ ಐಗೆ ತಿಳಿಸಿದ್ದಾರೆ.
"ಅದೊಮ್ಮೆ ಅವೆಲ್ಲವೂ ನ್ಯಾಯಸಮ್ಮತವಾಗಿದ್ದಲ್ಲಿ ಸರಿ, ಹಾಗಿಲ್ಲವಾದರೆ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಬೇಕಾಗುವುದು. ಮತ್ತು ಒಮ್ಮತಾಭಿಪ್ರಾಯಕ್ಕೆ ಬರಬೇಕಾಗುತ್ತದೆ." ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com