ಸತ್ಯ ಮಾತನಾಡಿದ್ದಕ್ಕಾಗಿ ನನಗೆ ಶಿಕ್ಷೆ ನೀಡಲಾಗಿದೆ: ಕುಮಾರ್ ವಿಶ್ವಾಸ್

ರಾಜ್ಯಸಭೆ ಟಿಕೆಟ್ ವಂಚಿತ ಕುಮಾರ್ ವಿಶ್ವಾಸ್ ಮತ್ತೊಮ್ಮೆ ಆಮ್ ಆದ್ಮಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸತ್ಯವನ್ನು ಮಾತನಾಡಿದ್ದಾಗಿ ನನಗೆ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಕುಮಾರ್ ವಿಶ್ವಾಸ್
ಕುಮಾರ್ ವಿಶ್ವಾಸ್
ನವದೆಹಲಿ: ರಾಜ್ಯಸಭೆ ಟಿಕೆಟ್ ವಂಚಿತ ಕುಮಾರ್ ವಿಶ್ವಾಸ್ ಮತ್ತೊಮ್ಮೆ ಆಮ್ ಆದ್ಮಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸತ್ಯವನ್ನು ಮಾತನಾಡಿದ್ದಾಗಿ ನನಗೆ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ, ಸರ್ಜಿಕಲ್ ಸ್ಟ್ರೈಕ್, ಭಯೋತ್ಪಾದನೆ ಕುರಿತು ಮೃದು ಧೋರಣೆ, ಜೆಎನ್ ಯು ವಿವಾದ ಸೇರಿದಂತೆ ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ, ನನ್ನ ಹಿರಿಯ ಸಹೋದರ ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರಗಳ ಬಗ್ಗೆ ಸತ್ಯವನ್ನು ಮಾತನಾಡಿದ್ದಕ್ಕಾಗಿ ಇಂದು ನನಗೆ ಶಿಕ್ಷೆ ವಿಧಿಸಲಾಗಿದೆ ಎಂದು ವಿಶ್ವಾಸ್ ಹೇಳಿದ್ದಾರೆ. 
ಆಮ್ ಆದ್ಮಿ ಪಕ್ಷ ಜ.16 ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಉದ್ಯಮಿ ಸುಶೀಲ್ ಗುಪ್ತಾ, ಸಿಎ ಎನ್ ಡಿ ಗುಪ್ತಾ, ಸಂಜಯ್ ಸಿಂಗ್ ಅವರನ್ನು ಕಣಕ್ಕಿಳಿಸಲಿದೆ.  ರಾಜ್ಯಸಭೆಗೆ ಸ್ಪರ್ಧಿಸಲು ಕುಮಾರ್ ವಿಶ್ವಾಸ್ ಸಹ ಆಕಾಂಕ್ಷಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com