ಭೀಮ ಕೋರೆಗಾಂವ್ ಹಿಂಸಾಚಾರ: ಮಹಾರಾಷ್ಟ್ರ ಬಂದ್ ವಾಪಸ್

ಭೀಮ ಕೋರೆಗಾಂವ್ ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಮಹಾ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಕರೆ ನೀಡಲಾಗಿದ್ದ ಮಹಾರಾಷ್ಟ್ರ ಬಂದ್ ನ್ನು ಪ್ರಕಾಶ್ ಅಂಬೇಡ್ಕರ್ ಹಿಂಪಡೆದಿದ್ದಾರೆ.
ಮಹಾರಾಷ್ಟ್ರಬಂದ್
ಮಹಾರಾಷ್ಟ್ರಬಂದ್
ಮುಂಬೈ: ಭೀಮ ಕೋರೆಗಾಂವ್ ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಮಹಾ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಕರೆ ನೀಡಲಾಗಿದ್ದ ಮಹಾರಾಷ್ಟ್ರ ಬಂದ್ ನ್ನು ಪ್ರಕಾಶ್ ಅಂಬೇಡ್ಕರ್ ಹಿಂಪಡೆದಿದ್ದಾರೆ. 
ಬಂದ್ ಗೆ ಕರೆ ನೀಡಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಜಿಗ್ನೇಶ್ ಮೇವಾನಿ, ಉಮರ್ ಖಾಲೀದ್ ವಿರುದ್ಧ ದಾಖಲಾಗಿರುವ ಪ್ರಚೋದನಕಾರಿ ಭಾಷಣದ ದೂರಿಗೂ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. 
ಜ.1 ರಂದು ಭೀಮಾ ಕೋರೆಗಾಂವ್ ನಲ್ಲಿ ಸೇರಿದ್ದ ಜನಸಮೂಹವನ್ನು ಪ್ರಚೋದಿಸಿದ್ದ ಭಿಡೆ ಗುರೂಜಿ ಹಾಗೂ ಮಿಲಿಂದ್ ಎಕ್ಬೋಟ್ ನ್ನು ಪೊಲೀಸರು ಬಂಧಿಸಬೇಕೆಂದು ಪ್ರಕಾಶ್ ಅಂಬೇಡ್ಕರ್ ಆಗ್ರಹಿಸಿದ್ದಾರೆ. ಮುಂಬೈ ಹಾಗೂ ಔರಂಗಾಬಾದ್ ನಲ್ಲಿ ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಬಂದ್ ಶಾಂತಿಯುತವಾಗಿತ್ತು ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಭೀಮ ಕೋರೆಗಾಂವ್ ಹಿಂಸಾಚಾರ ಮತ್ತಷ್ಟು ತೀವ್ರ: ಬಸ್ ಗಳಿಗೆ ಹಾನಿ, ರಸ್ತೆ ತಡೆ 

ಭೀಮ ಕೋರೆಗಾಂವ್ ಹಿಂಸಾಚಾರ ಮಹಾರಾಷ್ಟ್ರದಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆಯುತ್ತಿದ್ದು, ಪ್ರತಿಭಟನಾ ನಿರತರಿಂದ ಬಸ್ ಗಳು ಹಾನಿಗೊಳಗಾಗಿದ್ದು, ಒತ್ತಾಯಪೂರ್ವಕವಾಗಿ ರಸ್ತೆ ತಡೆ ಮಾಡಿಸಿದ್ದಾರೆ.  

ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ 100 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಜ.4 ರ ವರೆಗೂ ಸೆಕ್ಷನ್ 144 ನ್ನು ಜಾರಿಗೊಳಿಸಲಾಗಿದೆ. ಭೀಮ ಕೋರೆಗಾಂವ್ ಹಿಂಸಾಚಾರದ ಬೆನ್ನಲ್ಲೆ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ್ದರು. 

ಭೀಮ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ದೀಪಕ್ ಕೆಸರ್ಕಾರ್ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com