ಈ ಗ್ರಾಮದಲ್ಲಿ 20 ಲೌಡ್ ಸ್ಪೀಕರ್‍‍ಗಳಲ್ಲಿ ಮೊಳಗುತ್ತದೆ ರಾಷ್ಟ್ರಗೀತೆ; ಒಕ್ಕೊರಳಿನಿಂದ ಹಾಡುತ್ತಾರೆ ಗ್ರಾಮಸ್ಥರು!

ಜಾಟ್ ಸಮುದಾಯ ಪ್ರಭುತ್ವವಿರುವ ಭನಕ್ ಪುರ ಗ್ರಾಮದಲ್ಲಿ ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ರಾಷ್ಟ್ರಗೀತೆ ಮೊಳಗುತ್ತದೆ. ಈ ವೇಳೆ ಗ್ರಾಮದಲ್ಲಿರುವ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ರಾಷ್ಟ್ರಗೀತೆ...
ರಾಷ್ಟ್ರಧ್ವಜ
ರಾಷ್ಟ್ರಧ್ವಜ
ಭನಕ್‍ಪುರ್: ಜಾಟ್ ಸಮುದಾಯ ಪ್ರಭುತ್ವವಿರುವ ಭನಕ್ ಪುರ ಗ್ರಾಮದಲ್ಲಿ ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ರಾಷ್ಟ್ರಗೀತೆ ಮೊಳಗುತ್ತದೆ. ಈ ವೇಳೆ ಗ್ರಾಮದಲ್ಲಿರುವ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ರಾಷ್ಟ್ರಗೀತೆಯನ್ನು ಹಾಡುತ್ತಾರೆ. 
ಹರಿಯಾಣದ ಫರಿದಾಬಾದ್ ಜಿಲ್ಲೆಯ ಭನಕ್ ಪುರದಲ್ಲಿ ಗ್ರಾಮಸ್ಥರು ರಾಷ್ಟ್ರಗೀತೆ ಹಾಡುವ ಸಲುವಾಗಿ ಗ್ರಾಮದಲ್ಲಿ 2 ಲಕ್ಷ ರುಪಾಯಿ ವೆಚ್ಚದಲ್ಲಿ 20 ಲೌಡ್ ಸ್ಪೀಕರ್ ಗಳನ್ನು ಅಳವಡಿಸಲಾಗಿದೆ. 
ಗ್ರಾಮದ ಸರ್ ಪಂಚ್ ಸಚಿನ್ ಮಡೊಟಿಯಾ ಅವರು ಗುರುವಾರ ಈ ವ್ಯವಸ್ಥೆಯನ್ನು ಗ್ರಾಮದಲ್ಲಿ ಚಾಲನೆಗೆ ತಂದಿದ್ದಾರೆ. ಆರ್ಎಸ್ಎಸ್ ನ ಸ್ವಯಂ ಸೇವಕರೂ ಆಗಿರುವ 24ರ ಹರೆಯದ ಸಚಿನ್ ಗ್ರಾಮದಲ್ಲಿ ಲೌಡ್ ಸ್ಪೀಕರ್ ಮತ್ತು 22 ಸಿಸಿಟಿವಿಯನ್ನು ಅಳವಡಿಸಿದ್ದಾರೆ. 
ಇನ್ನು ಭಾರತದಲ್ಲಿ ತೆಲಂಗಾಣದ ಜಮ್ಮಿಕುಂಟ ಎಂಬ ಗ್ರಾಮದ ಗ್ರಾಮಸ್ಥರು ಜತೆಯಾಗಿ ರಾಷ್ಟ್ರಗೀತೆ ಹಾಡುತ್ತಾರೆ. ಅಲ್ಲಿಂದ ಪ್ರೇರಣೆ ಪಡೆದು ತಮ್ಮ ಗ್ರಾಮದಲ್ಲಿ ಈ ವ್ಯವಸ್ಥೆ ಕಲ್ಪಿಸಿರುವುದಾಗಿ ಸಚಿನ್ ಮಡೊಟಿಯಾ ಹೇಳಿದ್ದಾರೆ. 
ಗ್ರಾಮದಲ್ಲಿ ಇನ್ನು ಮುಂದೆ ದಿನಕ್ಕೆ ಎರಡು ಬಾರಿ ರಾಷ್ಟ್ರಗೀತೆ ಹಾಡುವಂತೆ ಮಾಡಲಾಗುವುದು. ಇದೀಗ ಪ್ರತಿದಿನ ಒಂದು ಬಾರಿ ಮಾತ್ರ ಹಾಡಲಾಗುತ್ತದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com