ಚಿತ್ರಕ್ಕೆ ಪ್ರಮಾಣ ಪತ್ರ ನೀಡಿರುವ ಕೇಂದ್ರ ಸರ್ಕಾರ, ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕರಣಿ ಸೇನಾ, ಈ ಚಿತ್ರವನ್ನು ಬೆಂಬಲಿಸುವುದರಿಂದ ಸರ್ಕಾರಕ್ಕೆ ಸಿಗುವ ಲಾಭವಾದರೂ ಏನು, ಹಿಂದೂ ಪರವಿರುವ ಪಕ್ಷಗಳು ಏಕೆ ಮೌನವಾಗಿವೆ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲದೇ ನೋಟು ನಿಷೇಧದ ನಂತರ ಹಣವಿಲ್ಲದೇ ಪರದಾಡುತ್ತಿದ್ದರು, ಆದರೆ ಬನ್ಸಾಲಿಗೆ ಹೇಗೆ ಹಣ ಸಿಕ್ಕಿತು ಎಂದು ಕರಣಿ ಸೇನೆ ಪ್ರಶ್ನಿಸಿದೆ.