ಭಾರತದಲ್ಲಿ ಪ್ರತಿಭೆಗಳ ಕೊರತೆ: ಸಿಬ್ಬಂದಿಗಳ ದುರ್ವರ್ತನೆಗೆ ಇಂಡಿಗೋ ಸಮರ್ಥನೆ

ಇಂಡಿಗೋ ವಿಮಾನ ಸಂಸ್ಥೆಯ ಸಿಬ್ಬಂದಿಗಳು ಪ್ರಯಾಣಿಕರ ವಿರುದ್ಧ ದುರ್ವರ್ತನೆ ತೋರಿರುವ ಪ್ರಕರಣಗಳ ಬಗ್ಗೆ ಸಂಸತ್ ನ ಸ್ಥಾಯಿ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೆ, ಇಂಡಿಗೋ ಸಂಸ್ಥೆ ಮಾತ್ರ ತನ್ನದೇ..
ಇಂಡಿಗೋ
ಇಂಡಿಗೋ
ನವದೆಹಲಿ: ಇಂಡಿಗೋ ವಿಮಾನ ಸಂಸ್ಥೆಯ ಸಿಬ್ಬಂದಿಗಳು ಪ್ರಯಾಣಿಕರ ವಿರುದ್ಧ ದುರ್ವರ್ತನೆ ತೋರಿರುವ ಪ್ರಕರಣಗಳ ಬಗ್ಗೆ ಸಂಸತ್ ನ ಸ್ಥಾಯಿ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೆ, ಇಂಡಿಗೋ ಸಂಸ್ಥೆ ಮಾತ್ರ ತನ್ನದೇ ಸಮರ್ಥನೆ ನೀಡಿದೆ. 
ಪ್ರತಿಭಾಶಾಲಿ ಸಿಬ್ಬಂದಿಗಳನ್ನು ತರುವುದರಲ್ಲಿ ನಮಗೂ ಸವಾಲುಗಳಿವೆ, 130 ಕೋಟಿಯಷ್ಟು ಜನಸಂಖ್ಯೆಯುಳ್ಳ ದೇಶದಲ್ಲಿ ನಮಗೆ ಪ್ರತಿಭೆಗಳ ಕೊರತೆ ಕಾಡುತ್ತಿದೆ, ಹಲವು ಪದವಿಗಳನ್ನು ಹೊಂದಿರುವ ಯುವ ಸಮೂಹವನ್ನು ನಾವು ಹೊಂದಿದ್ದೇವೆ ಆದರೆ ನಮಗೆ ಬೇಕಿರುವ ಪ್ರತಿಭೆ ಸಿಗುತ್ತಿಲ್ಲ, ಟೈರ್-II ಟೈರ್-III ನಗರಗಳಿಂದ ನಾವು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅಲ್ಲಿಯೂ ಉದ್ಯೋಗ ಸೃಷ್ಟಿಸುತ್ತಿದ್ದೇವೆ ಆದರೆ ಸರ್ಕಾರಿ ಶಾಲೆ, ಗ್ರಾಮೀಣ ಶಾಲೆಗಳಲ್ಲಿ ಓದಿದವರು ಇಂಗ್ಲೀಷ್ ಮಾತನಾಡುವುದಕ್ಕೆ ಸಾಧ್ಯವಾಗುತ್ತಿಲ್ಲ, ನಮಗೆ ಪ್ರತಿಭೆಗಳ ಕೊರತೆ ಉಂಟಾಗಿದೆ ಎಂದು ಸಂಸ್ಥೆ ಸಮರ್ಥನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com