ಭೀಮಾ ಕೋರೆಗಾಂವ್ ಹಿಂಸಾಚಾರ: ಮಹಾರಾಷ್ಟ್ರ ಅರಾಜಕತೆಯತ್ತ ಸಾಗುತ್ತಿದೆ ಎಂದ ಶಿವಸೇನೆ

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೇವೇಂದ್ರ ಫಡ್ನವಿಸ್ ಸರ್ಕಾರದ ವಿರುದ್ಧ ತೀವ್ರ ದಾಳಿ ನಡೆಸಿರುವ ಮಿತ್ರ ಪಕ್ಷ ಶಿವಸೇನೆ...
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೇವೇಂದ್ರ ಫಡ್ನವಿಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಿತ್ರ ಪಕ್ಷ ಶಿವಸೇನೆ, ಮಹಾರಾಷ್ಟ್ರ ಅರಾಜಕತೆಯತ್ತ ಸಾಗುತ್ತಿದೆ ಎಂದು ಶನಿವಾರ ಆರೋಪಿಸಿದೆ.
ಒಂದು ಕಡೆ ದಲಿತರು ಬಂದ್ ಕರೆ ನೀಡುತ್ತಿದ್ದಾರೆ, ಮತ್ತೊಂದು ಕಡೆ ಹಿಂದೂತ್ವವಾದಿ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಇದೇಲ್ಲವನ್ನು ನೋಡಿದರೆ ಮಹಾರಾಷ್ಟ್ರ ಅರಾಜಕತೆಯತ್ತ ಸಾಗುತ್ತಿದೆ ಮತ್ತು ಜಾತಿ ಸಂಘರ್ಷಕ್ಕೆ ರಾಜ್ಯ ಬಲಿಯಾಗುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.
ಒಂದು ವೇಳೆ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ಭಾರಿಪ ಬಹುಜನ ಮಹಾಸಂಘ ಕರೆ ನೀಡಿದ್ದ ಬಂದ್ ಶಾಂತಿಯುತವಾಗಿದ್ದರೆ ಅವರ ನಾಯಕತ್ವಕ್ಕೆ ಬೆಲೆ ಬರುತ್ತಿತ್ತು. ಆದರೆ ಗೊತ್ತು ಗುರಿಯಿಲ್ಲದ ಅವರ ಬೆಂಬಲಿಗರು ಕೋಲ್ಲಾಪುರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅಪವಿತ್ರಗೊಳಿಸಿದ್ದಾರೆ ಎಂದು ಸಾಮ್ನಾ ಟೀಕಿಸಿದೆ.
ಹೊಸ ವರ್ಷದ ಮೊದಲ ದಿನ ಭೀಮಾ ಕೋರೆಗಾಂವ್ ವಿಜಯೋತ್ಸವ  ವೇಳೆ ನಡೆದ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ದಲಿತರ ಮೇಲೆ ದಾಳಿ ಖಂಡಿಸಿ ಮಹಾರಾಷ್ಟ್ರಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com