ಆಧಾರ್ ಮಾಹಿತಿ ಸೋರಿಕೆ ವರದಿ; ದಿ ಟ್ರಿಬ್ಯೂನ್, ವರದಿಗಾರ್ತಿ ವಿರುದ್ಧ ಎಫ್ಐಆರ್ ದಾಖಲಿಸಿದ ಯುಐಡಿಎಐ

ದೇಶದ ನಾಗರಿಕರ ಆಧಾರ್ ಮಾಹಿತಿ ಕೇವಲ 500 ರುಪಾಯಿಗೆ ಮಾರಾಟವಾಗುತ್ತಿರುವ ಕುರಿತು ತನಿಖಾ ವರದಿ ಪ್ರಕಟಿಸಿದ್ದ ದಿ ಟ್ರಿಬ್ಯೂನ್ ಪತ್ರಿಕೆ...
ಆಧಾರ್
ಆಧಾರ್
ನವದೆಹಲಿ: ದೇಶದ ನಾಗರಿಕರ ಆಧಾರ್ ಮಾಹಿತಿ ಕೇವಲ 500 ರುಪಾಯಿಗೆ ಮಾರಾಟವಾಗುತ್ತಿರುವ ಕುರಿತು ತನಿಖಾ ವರದಿ ಪ್ರಕಟಿಸಿದ್ದ ದಿ ಟ್ರಿಬ್ಯೂನ್ ಪತ್ರಿಕೆ ವರದಿಗಾರ್ತಿ ವಿರುದ್ಧ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಎಫ್ಐಆರ್ ದಾಖಲಿಸಿದೆ. 
ವರದಿಗಾರ್ತಿ ರಚನಾ ಖೈರಾ ಆರು ತಿಂಗಳ ಕಾಲ ತನಿಖೆ ನಡೆಸಿ ದೇಶದ ಕೋಟ್ಯಾಂತರ ಭಾರತೀಯರ ಆಧಾರ್ ಮಾಹಿತಿ ಸೋರಿಕೆಯಾಗಿರುವ ಕುರಿತು ಇತ್ತೀಚೆಗೆ ವರದಿ ಪ್ರಕಟಿಸಿದ್ದರು. ನಿಯಮ ಉಲ್ಲಂಘನೆ ಆರೋಪದ ಮೇಲೆ ಯುಐಡಿಎಐ ಉಪನಿರ್ದೇಶಕರು ಟ್ರಿಬ್ಯೂನ್ ಪತ್ರಿಕೆ ಹಾಗೂ ರಚನಾ ಖೈರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 
ತನಿಖೆ ವೇಳೆ ರಚನಾ ಜತೆ ಸಂಪರ್ಕದಲ್ಲಿದ್ದ ಇನ್ನು ಮೂವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಯುಐಡಿಎಐ ಇವರೆಲ್ಲರ ವಿರುದ್ಧ ಎಫ್ಐಆರ್ ದಾಖಲಿಸಿರುವುದರಿಂದ ನಾವು ಅವರನ್ನು ಹೆಸರನ್ನು ಬಹಿರಂಗಗೊಳಿಸುವಂತಿಲ್ಲ. ಸದ್ಯ ತನಿಖೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅವರ ಹೆಸರನ್ನು ಬಹಿರಂಗಪಡಿಸುವುದಾಗಿ ಕ್ರೈಂ ಬ್ರಾಂಚ್ ನ ಜಂಟಿ ಆಯುಕ್ತರಾದ ಅಲೋಕ್ ಕುಮಾರ್ ತಿಳಿಸಿದ್ದಾರೆ. 
ರಚನಾ ಖೈರಾ ವಾಟ್ಸ್ ಆ್ಯಪ್ ಮೂಲಕ ಅನಾಮಿಕ ಮಾರಾಟಗಾರನಿಂದ ಆಧಾರ್ ಮಾಹಿತಿ ಹೊಂದಿರುವ ಪೋರ್ಟಲ್ ನ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ಪಡೆದಿದ್ದಾರೆ. ಪೆಟಿಎಂ ಮೂಲಕ 500 ರುಪಾಯಿ ಪಾವತಿಯಾಗಿ ಕೆಲವೇ ಕ್ಷಣಗಳಲ್ಲಿ ಮಾರಾಟಗಾರ ಆಧಾರ್ ಮಾಹಿತಿ ಉಪಯೋಗಿಸಲು ಅಗತ್ಯವಾದ ಲಿಂಕ್ ರವಾನಿಸಿದ್ದಾನೆ. ಆ ಪೋರ್ಟಲ್ ನಲ್ಲಿ ಯಾವುದೇ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿದಾಗ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಫೋಟೊ ಸೇರಿ ಸಂಪೂರ್ಣ ಮಾಹಿತಿ ಪಡೆಯಬಹುದಾಗಿತ್ತು ಎಂದು ವರದಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com