ಪಾಕಿಸ್ತಾನ-ಪ್ರಧಾನಿ ಮೋದಿ ಸ್ನೇಹಿತರಾಗಬೇಕು-ಮೆಹೆಬೂಬಾ ಮುಫ್ತಿ

ಪಾಕ್ ಹಾಗೂ ಭಾರತದ ನಡುವೆ ಸೌಹರ್ದಯುತವಾದ ವಾತಾವರಣ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ಆಗಾಗ್ಗೆ ವ್ಯಕ್ತವಾಗುತ್ತಲೇ ಇರುತ್ತದೆ.
ಮೆಹೆಬೂಬಾ ಮುಫ್ತಿ
ಮೆಹೆಬೂಬಾ ಮುಫ್ತಿ
ಶ್ರೀನಗರ: ಪಾಕ್ ಹಾಗೂ ಭಾರತದ ನಡುವೆ ಸೌಹರ್ದಯುತವಾದ ವಾತಾವರಣ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ಆಗಾಗ್ಗೆ ವ್ಯಕ್ತವಾಗುತ್ತಲೇ ಇರುತ್ತದೆ. ಈಗ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಹ ಇದಕ್ಕೆ ಧ್ವನಿಗೂಡಿಸಿದ್ದು, ಪಾಕಿಸ್ತಾನ- ಪ್ರಧಾನಿ ನರೇಂದ್ರ ಮೋದಿ ಸ್ನೇಹಿತರಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 
ಕಾಶ್ಮೀರದ ಸ್ಥಳೀಯ ಜನತೆ ಹಾಗೂ ಸೈನಿಕರಿಗಾಗಿ ಪಾಕಿಸ್ತಾನ ಹಾಗೂ ಪ್ರಧಾನಿ ಮೋದಿ ಸ್ನೇಹಿತರಾಗಬೇಕು " ಸ್ನೇಹಿತರಾಗುವ ಮೂಲಕ ಪಾಕಿಸ್ತಾನ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ಜನತೆ ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಹಾಗೂ ಸೈನಿಕರನ್ನು ಉಳಿಸಬೇಕು ಮನವಿ ಮಾಡುವುದಾಗಿ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. 
ಬಾರಾಮುಲ್ಲಾ ಜಿಲ್ಲೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ಐಇಡಿ ಸ್ಫೋಟದಿಂದ ಮೃತಪಟ್ಟಿರುವ ಬೆನ್ನಲ್ಲೇ ಮುಫ್ತಿ ಈ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com