ದೇಹದಲ್ಲಿ 22 ಲೀಟರ್ ರಕ್ತ ಹೀರಿದ್ದ ಕೊಕ್ಕೆ ಹುಳುಗಳು; ಅಪರೂಪದ ಎಂಡೋಸ್ಕೊಪಿ ಮೂಲಕ ಗುಣ

ಅಪರೂಪದ ಪ್ರಕರಣವೊಂದರಲ್ಲಿ ದೆಹಲಿಯ 14 ವರ್ಷದ ಬಾಲಕನ ಸಣ್ಣ ಕರುಳಿನಲ್ಲಿದ್ದ ಕೊಕ್ಕೆ ಹುಳಗಳು ಸುಮಾರು 22 ಲೀ. ರಕ್ತ ಹೀರಿವೆ!
ಅಪರೂಪದ ವೈದ್ಯಕೀಯ ಪ್ರಕರಣವು ಜರ್ನಲ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ಅಂಡ್ ಥೆರಪಿ ಯ ಇತ್ತೀಚಿನ ಆವೃತ್ತಿಯಲ್ಲಿ ಪ್ರಕಟಿಸಲ್ಪಟ್ಟಿದೆ.
ಅಪರೂಪದ ವೈದ್ಯಕೀಯ ಪ್ರಕರಣವು ಜರ್ನಲ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ಅಂಡ್ ಥೆರಪಿ ಯ ಇತ್ತೀಚಿನ ಆವೃತ್ತಿಯಲ್ಲಿ ಪ್ರಕಟಿಸಲ್ಪಟ್ಟಿದೆ.
ನವದೆಹಲಿ: ಅಪರೂಪದ ಪ್ರಕರಣವೊಂದರಲ್ಲಿ ದೆಹಲಿಯ 14 ವರ್ಷದ ಬಾಲಕನ ಸಣ್ಣ ಕರುಳಿನಲ್ಲಿದ್ದ ಕೊಕ್ಕೆ ಹುಳಗಳು  ಸುಮಾರು 22 ಲೀ. ರಕ್ತ ಹೀರಿವೆ! ಕಳೆದ ಎರಡು ವರ್ಷಗಳಿಂದ ಬಾಲಕ ಈ ಮಾರಕ ಪರಿಸ್ಥಿತಿಯಿಂದ ಬಳಲುತ್ತಿದ್ದು ದೆಹಲಿ ಆಸ್ಪತ್ರೆ ವೈದ್ಯರು ಅವನಿಗೆ ಸೂಕ್ತ ಚಿಕಿತ್ಸೆ ನಿಡಿ ಗುಣಪಡಿಸಿದ್ದಾರೆ.
ವಿಶೇಷವಾಗಿ ವಿಟಮಿನ್ ಕ್ಯಾಪ್ಸುಲ್ ಗಾತ್ರದ ಎಂಡೊಸ್ಕೋಪಿ ಅನ್ನು ನಡೆಸಿದ ಆಸ್ಪತ್ರೆಯ ವೈದ್ಯರು ಈ ರೋಗವನ್ನು ಪತ್ತೆಹಚ್ಚಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ಹುಡುಗನ ಮಲದಲ್ಲಿ ಶೇಖರವಾದ ರಕ್ತವನ್ನು ಕಂಡು ಅವನನ್ನು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
"ಕಳೆದ ಎರಡು ವರ್ಷಗಳಿಂದ ಕಬ್ಬಿಣಾಂಶ ಕೊರತೆ, ರಕ್ತಹೀನತೆಯಿಂದ ಬಳಲುತ್ತಿದ್ದ ಮಗುವಿಗೆ ಪುನರಾವರ್ತಿತ ರಕ್ತ ವರ್ಗಾವಣೆ ನಡೆಸಲಾಗುತ್ತಿದೆ. ಮತ್ತು ಕಳೆದ ಎರಡು ವರ್ಷಗಳಲ್ಲಿ 50 ಯೂನಿಟ್ (22 ಲೀಟರ್) ರಕ್ತ ವರ್ಗಾವಣೆಯನ್ನು ನಡೆಸಲಾಗಿದೆ"ಎಸ್ ಆರ್ ಜಿ ಎಚ್ ನಲ್ಲಿ ಗ್ಯಾಸ್ರೋಎನ್ಟೆರಾಲಜಿ ವಿಭಾಗದ ಅಧ್ಯಕ್ಷ,  ಅನಿಲ್ ಅರೋರಾ ಹೇಳಿದ್ದಾರೆ.
ಅಯೋಫಾಗೋಗ್ಯಾಸ್ಟ್ರೊಡೋಡೆನೋಸ್ಕೊಪಿ (ಇಜಿಡಿ), ಕೊಲೊನೋಸ್ಕೊಪಿ ಮತ್ತು ಕರುಳಿನ ವಿಕಿರಣಶಾಸ್ತ್ರದ ಅಧ್ಯಯನಗಳು ಸೇರಿದಂತೆ ಅನೇಕ ಪರೀಕ್ಷೆಗಳ ಹೊರತಾಗಿಯೂ ರೋಗಿಯ ರೋಘನಿರ್ಣಯ ಮಾದಲು ಸಾಧ್ಯವಾಗಿರಲಿಲ್ಲ. ರೋಗಿಯ  ಹಿಮೋಗ್ಲೋಬಿನ್ ಪ್ರಮಾಣ 5.86ಕ್ಕೆ ಕಡಿಮೆಯಾಗಿತ್ತು. ಸಮಸ್ಯೆಯು ಮುಂದುವರಿದಂತೆ, ರಕ್ತಸ್ರಾವ ಪ್ರಮಾಣ ಹೆಚ್ಚುತ್ತಿದ್ದಂತೆ ವೈದ್ಯರು ವಿಟಮಿನ್ ಕ್ಯಾಪ್ದ್ಸೂಲ್ ಗಾತ್ರದ  ಎಂಡೋಸ್ಕೋಪಿ ಬಳಸಲು ನಿರ್ಧರಿಸಿದ್ದರು.ಎಂದು ಅರೋರಾ ಹೇಳಿದರು.
ಕ್ಯಾಪ್ಸುಲ್ ಎಂಡೋಸ್ಕೋಪಿ ಎನ್ನುವುದು ಜೀರ್ಣಾಂಗಗಳ ಚಿತ್ರಗಳನ್ನು ತೆಗೆದುಕೊಳ್ಳಲು ಸಣ್ಣ ನಿಸ್ತಂತು ಕ್ಯಾಮರಾವನ್ನು ಬಳಸುವ ವಿಧಾನವಾಗಿದೆ. ಕ್ಯಾಪ್ಸುಲ್ ಎಂಡೊಸ್ಕೋಪಿ ಕ್ಯಾಮರಾ ರೋಗಿಯು ನುಂಗಲು ಅಗತ್ಯವಿರುವ ವಿಟಮಿನ್ ಮಾತ್ರೆ ಗಾತ್ರದಲ್ಲಿರುತ್ತದೆ.
ಕ್ಯಾಪ್ಸುಲ್ ಎಂಡೋಸ್ಕೋಪಿ ಎನ್ನುವುದು ಜೀರ್ಣಾಂಗಗಳ ಚಿತ್ರಗಳನ್ನು ತೆಗೆದುಕೊಳ್ಳಲು ಸಣ್ಣ ನಿಸ್ತಂತು ಕ್ಯಾಮರಾವನ್ನು ಬಳಸುವ ವಿಧಾನವಾಗಿದೆ. ಕ್ಯಾಪ್ಸುಲ್ ಎಂಡೊಸ್ಕೋಪಿ ಕ್ಯಾಮರಾ ರೋಗಿಯು ನುಂಗಲು ಅಗತ್ಯವಿರುವ ವಿಟಮಿನ್ ಮಾತ್ರೆ ಗಾತ್ರದಲ್ಲಿರುತ್ತದೆ. "ನಾವು ಸಣ್ಣ ಕರುಳಿನಲ್ಲಿ ಇದ್ದ ಅನೇಕ ಕೊಕ್ಕೆ ಹುಲಗಳನ್ನು ಪತ್ತೆಹಚ್ಚಿದೆವು ಮತ್ತು ಅವುಗಳು ಸತತವಾಗಿ ಬಾಲಕನ ದೇಹದಿಂದ ರಕ್ತವನ್ನು ಹಿರಿಕೊಳ್ಳುತ್ತಿದ್ದವು. ಹೀರಿದ್ದ ರಕ್ತವನ್ನು ಕೊಕ್ಕೆ ಹುಳಗಳ ಕುಳಿಯಲ್ಲಿ ಕಾಣತ್ತಿದ್ದವು. ಚಿಕಿತ್ಸೆಯ ನಂತರ ಬಾಲಕ ಚೇತರಿಸಿಕೊಂಡಿದ್ದಾನೆ, ಅವನ ಹಿಮೋಗ್ಲೋಬಿನ್ 11 ಗ್ರಾಂ / ಡಿಎಲ್ಗೆ ಹೆಚ್ಚಳವಾಗಿದೆ." ಅರೋರಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com