ಠೇವಣಿ ಕಟ್ಟಿ ಇಲ್ಲವೇ ತಿಹಾರ್ ಗೆ ಹೋಗಿ: ಜೇಪೀ ಅಸೋಸಿಯೇಟ್ಸ್ ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ ಜೇಪೀ ಅಸೋಸಿಯೇಟ್ಸ್ 125 ಕೋಟಿ ರೂ. ಠೇವಣಿ ಪಾವತಿಸಲಿಲ್ಲ. ಇದು ನ್ಯಾಯಾಂಗ ನಿಂದನೆಯಾಗುತ್ತದೆ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ ಜೇಪೀ ಅಸೋಸಿಯೇಟ್ಸ್ 125 ಕೋಟಿ ರೂ. ಠೇವಣಿ ಪಾವತಿಸಲಿಲ್ಲ. ಇದು ನ್ಯಾಯಾಂಗ ನಿಂದನೆಯಾಗುತ್ತದೆ ಹೀಗಾದಲ್ಲಿ ತಿಹಾರ್ ಜೈಲು ವಾಸ ದೂರಲಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಅಭಿಪ್ರಾಯಪಟ್ಟಿದೆ.
ಇದು 2,000 ಕೋಟಿ ರೂ. ನ ಭಾಗವಾಗಿದ್ದು ಜೇಪಿ ಇನ್ಫ್ರಾಟೆಕ್ ನಿಂದ ಮನೆ ಖರೀದಿಸಿದವರಿಗೆ ಹಣ ಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯವು ಜೇಪೀ ಅಸೋಸಿಯೇಟ್ಸ್ ಗೆ ಸೂಚಿಸಿದೆ. ಜಪೀ ಅಸೋಸಿಯೇಟ್ಸ್ ಜನವರಿ 25ರ ಒಳಗೆ 125 ಕೋಟಿ ರೂ.ಠೇವಣಿ ಪಾವತಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚುಡ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದ್ದು  ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಎಲ್ಲಾ ವಸತಿ ಯೋಜನೆಗಳ ಬಗ್ಗೆ ಅಫಿಡವಿಟ್ ಸಲ್ಲಿಸಲು ಜೇಪೀ ಅಸೋಸಿಯೇಟ್ಸ್ ಗೆ ಆದೇಶಿಸಿದೆ.
ಇದಾದ ಬಳಿಕ ಜೇಪೀ ಅಸೋಸಿಯೇಟ್ಸ್ ವಿರುದ್ಧ  ದಿವಾಳಿತನ ಸಂಹಿತೆಯ (ಐಬಿಸಿ) ಅಡಿಯಲ್ಲಿ ವಿಚಾರಣೆ ಪ್ರಾರಂಭಿಸಲು ರಿಸರ್ವ್ ಬ್ಯಾಂಕ್ ಕೋರಿದ್ದ ಅರ್ಜಿಯನ್ನು ಉನ್ನತ ನ್ಯಾಯಾಲಯ ಪರಿಶೀಲಿಸಲಿದೆ ಎಂದು ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com