ಶೇ.12ರಷ್ಟು ಜಿಎಸ್ ಟಿ ಖಂಡಿಸಿ ಪ್ರಧಾನಿ ಮೋದಿಗೆ ನ್ಯಾಪ್ಕಿನ್ ಮೇಲೆ ಸಂದೇಶ ಕಳಿಸಿದ ವಿದ್ಯಾರ್ಥಿಗಳು

ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್‌ಕಿನ್ ಗಳ ಮೇಲೆ ವಿಧಿಸುತ್ತಿರುವ ಶೇ. 12 ಜಿಎಸ್‌ಟಿ ವಿರೋಧಿಸಿ ಗ್ವಾಲಿಯರ್ ನಗರದ ವಿದ್ಯಾರ್ಥಿಗಳ....
ಸಂದೇಶ ಬರೆದಿರುವ ನ್ಯಾಪ್ಕಿನ್
ಸಂದೇಶ ಬರೆದಿರುವ ನ್ಯಾಪ್ಕಿನ್
ಗ್ವಾಲಿಯರ್: ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್‌ಕಿನ್ ಗಳ ಮೇಲೆ ವಿಧಿಸುತ್ತಿರುವ ಶೇ. 12 ಜಿಎಸ್‌ಟಿ ವಿರೋಧಿಸಿ ಗ್ವಾಲಿಯರ್ ನಗರದ ವಿದ್ಯಾರ್ಥಿಗಳ ತಂಡವೊಂದು ವಿಶಿಷ್ಟ ಅಭಿಯಾನವೊಂದನ್ನು ಆರಂಭಿಸಿದೆ.
ವಿದ್ಯಾರ್ಥಿಗಳು ತಮ್ಮ ಆಗ್ರಹವನ್ನು ಸ್ಯಾನಿಟರಿ ನ್ಯಾಪ್‌ಕಿನ್ ಗಳ ಮೇಲೆ ಬರೆದಿದ್ದು, ಹೀಗೆ ಬರೆಯಲಾದ 1000 ಸ್ಯಾನಿಟರಿ ನ್ಯಾಪ್‌ಕಿನ್ ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಿದ್ದಾರೆ. ಈ ಮೂಲಕ  ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ತೆರಿಗೆ ಮುಕ್ತಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ಸ್ವಚ್ಛ ಭಾರತದ ಹೆಸರು ಹೇಳುತ್ತಿರುವ ಮೋದಿ ಮಹಿಳೆಯರ ಸ್ವಚ್ಛತೆಗೆ ಗಮನ ನೀಡುತ್ತಿಲ್ಲ. ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಶೇ12ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದೆ. ಮಹಿಳೆಯರ ತಿಂಗಳ ಅಗತ್ಯಕ್ಕೆ ಬೆಲೆ ನೀಡುತ್ತಿಲ್ಲ.ಹೀಗಾಗಿ ಈ ರೀತಿ ಪ್ರತಿಭಟನೆ ನಡೆಸಲಾಗುತ್ತಿದೆ. 1 ಸಾವಿರ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ಮನ್ ಕಿ ಬಾತ್ ಬರೆದು ಮೋದಿ ಅವರಿಗೆ ಕಳಿಸಲಾಗುತ್ತಿದೆ ಎಂದು ಪ್ರತಿಭಟನಾ ಅಭಿಯಾನದ ಮುಖ್ಯಸ್ಥರಾದ ಪ್ರೀತಿ ಜೋಶಿ ಹಾಗೂ ಹರಿ ಮೋಹನ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com