ಒಟ್ಟು ಮೂವರು ಯೋಧರು ಹೆಲಿಕಾಪ್ಟರ್ ನಿಂದ ಹಗ್ಗದ ಮೂಲಕ ಕೆಳಗಿಳಿಯುತ್ತಿದ್ದ ಸಮಯ ಈ ಘಟನೆ ನಡೆದಿದೆ. ಇಬ್ಬರು ಯೋಧರು ಹಗ್ಗ ಹಿಡಿದು ಕೆಳಗಿಳಿಯುತ್ತಿದ್ದಾಗ ಮೂರಣೇ ಯೋಧನೂ ಹಗ್ಗದ ಮೂಲಕ ಕೆಳಗೆ ಇಳಿಯಲು ಪ್ರಾರಂಭಿಸಿದ್ದಾನೆ. ಆಗ ನಡುವೆಯೇ ಹಗ್ಗ ತುಂಡಾಗಿದೆ. ಪರಿಣಾಮ ಮೂವರು ಯೋಧರೂ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮಂಗಳವಾರದಂದು ಸಂಭವಿಸಿದ ಈ ಘಟನೆಯ ದೃಶ್ಯಾವಳಿಗಳು ರಾಷ್ಟ್ರೀಯ ಮಾದ್ಯಮಗಳಲ್ಲಿ ಇಂದು ಪ್ರಸಾರವಾಗಿದೆ.