ಥಾಯ್ ಲೆಂಡ್ ನಲ್ಲಿ ಭಾರತ-ಪಾಕ್ ಎನ್ಎಸ್ಎಗಳ ಭೇಟಿ ಬಹಿರಂಗ, ಭಯೋತ್ಪಾದನೆ ಚರ್ಚೆಯ ಪ್ರಮುಖಾಂಗ
2017 ರ ಡಿಸೆಂಬರ್ ನಲ್ಲಿ ಭಾರತ-ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರು ಥಾಯ್ ಲೆಂಡ್ ನ ರಾಜಧಾನಿ ಬ್ಯಾಂಕಾಕ್ ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದನ್ನು ವಿದೇಶಾಂಗ ಇಲಾಖೆ ಈಗ...
ಥಾಯ್ ಲೆಂಡ್ ನಲ್ಲಿ ಭಾರತ-ಪಾಕ್ ಎನ್ಎಸ್ಎಗಳ ಭೇಟಿ ಬಹಿರಂಗ, ಭಯೊತ್ಪಾದನೆ ಚರ್ಚೆಯ ಪ್ರಮುಖಾಂಗ
ನವದೆಹಲಿ:2017 ರ ಡಿಸೆಂಬರ್ ನಲ್ಲಿ ಭಾರತ-ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರು ಥಾಯ್ ಲೆಂಡ್ ನ ರಾಜಧಾನಿ ಬ್ಯಾಂಕಾಕ್ ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದನ್ನು ವಿದೇಶಾಂಗ ಇಲಾಖೆ ಈಗ ಬಹಿಂಗಪಡಿಸಿದೆ.
ಎರಡೂ ದೇಶಗಳ ಎನ್ಎಸ್ಎ ಗಳು ಭಯೋತ್ಪಾದನೆ ವಿಷಯವಾಗಿ ಚರ್ಚೆ ನಡೆಸಿದ್ದು, ಗೌಪ್ಯ ಸಭೆಯಾಗಿತ್ತು ಎಂದು ವಿದೇಶಾಂಗ ಇಲಾಖೆ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುವುದೇ ಆದರೆ ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರೆಯುತ್ತದೆ ಎಂದು ಭಾರತ ಹೇಳಿದೆ.
ಡಿ.27 ರಂದು ಥಾಯ್ ಲೆಂಡ್ ನಲ್ಲಿ ಭಾರತ-ಪಾಕಿಸ್ತಾನ ಎನ್ಎಸ್ಎ ಗಳ ಸಭೆ ನಡೆದಿದೆ ಎಂಬ ವರದಿಗಳು ಪ್ರಕಟವಾಗಿತ್ತು.