ಲಾಲ್ ಬಹದ್ದೂರ್ ಶಾಸ್ತ್ರಿ 52ನೇ ಪುಣ್ಯದಿನ: ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಸ್ಮರಣೆ
ಭಾರತದ ಎರಡನೇ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 52ನೇ ಪುಣ್ಯ ದಿನವಾದ ಇಂದು ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ಅನೇಕ ಗಣ್ಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ನವದೆಹಲಿ: ಭಾರತದ ಎರಡನೇ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 52ನೇ ಪುಣ್ಯ ದಿನವಾದ ಇಂದು ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ಅನೇಕ ಗಣ್ಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
We pay homage to Shastri Ji on his Punya Tithi. His impeccable service and courageous leadership will be remembered for generations to come.
ಶಾಸ್ತ್ರಿ ಅವರ ಅಮೂಲ್ಯ ಸೇವೆ, ದಿಟ್ಟ ನಾಯಕತ್ವವನ್ನು ಮುಂದಿನ ಪೀಳಿಗೆಗಳವರು ಬೆಳೆಸಿಕೊಳ್ಳಲಿದ್ದಾರೆ ಎಂಡು ಮೋದಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯ ಸ್ಮರಣೆ ಅಂಗವಾಗಿ ನಾನು ಅವರಿಗೆ ಶ್ರದ್ದಾಂಜಲಿ ಸಮರ್ಪಿಸುತ್ತೇನೆ. ದೇಶದ ಏಕತೆಗೆ, ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಅಮೂಲ್ಯವಾದದ್ದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
"Among the major tasks before us, none is of greater importance for our strength and stability than the task of building up the unity and solidarity of our people."
My tributes to former Prime Minister Lal Bahadur Shastri ji on his death anniversary. pic.twitter.com/5SYvcA6sWP
1904ರಲ್ಲಿ ಜನಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ 1964-1966ರ ನಡುವೆ ಭಾರತದ ಎರಡನೇ ಪ್ರಧಾನಿಗಳಗಿ ಕಾರ್ಯ ನಿರ್ವಹಿಸಿದ್ದರು. 1965ರ ಭಾರತ-ಪಾಕಿಸ್ತಾನ ಯುದ್ಧ ಸಮಯದಲ್ಲಿ ಅವರು ತೋರಿದ್ದ ದಿಟ್ಟ ನಿಲುವು ಎಂದಿಗೂ ಮರೆಯಲಾರದುದಾಗಿದೆ. 1966ರಲ್ಲಿ ಪಾಕಿಸ್ತಾನದೊಡನೆ ಮಾತುಕತೆಗಾಗಿ ತಾಷ್ಕೆಂಟ್ ಗೆ ತೆರಳಿದ್ದ ಶಾಸ್ತ್ರಿ ಅಲ್ಲಿಯೇ ನಿಧನರಾಗಿದ್ದರು.