ದೆಹಲಿಯಲ್ಲಿ ಅಪರಾಧ ಪ್ರಕರಣಗಳು ಶೇ.12 ಕ್ಕೆ ಏರಿಕೆ: ಪೊಲೀಸ್ ಇಲಾಖೆ

ರಾಷ್ಟ್ರರಾಜಧಾನಿಯಲ್ಲಿ 2017 ರಲ್ಲಿ ಒಟ್ಟು 2,23,075 ಅಪರಾಧ ಪ್ರಕರಣಗಳು ದಾಖಲಾಗಿದ್ದು 2016 ಕ್ಕೆ ಹೋಲಿಸಿದರೆ ಶೇ.12 ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ದೆಹಲಿ ಪೊಲೀಸ್ ಇಲಾಖೆ ಹೇಳಿದೆ.
ದೆಹಲಿ ಪೊಲೀಸ್
ದೆಹಲಿ ಪೊಲೀಸ್
ದೆಹಲಿ: ರಾಷ್ಟ್ರರಾಜಧಾನಿಯಲ್ಲಿ 2017 ರಲ್ಲಿ ಒಟ್ಟು 2,23,075 ಅಪರಾಧ ಪ್ರಕರಣಗಳು ದಾಖಲಾಗಿದ್ದು 2016 ಕ್ಕೆ ಹೋಲಿಸಿದರೆ ಶೇ.12 ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ದೆಹಲಿ ಪೊಲೀಸ್ ಇಲಾಖೆ ಹೇಳಿದೆ. 
ಮಾಧ್ಯಮಗಳೊಂದಿಗೆ ಮಾತನಾಡಿರುವ ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್, ಮೋಟಾರು ವಾಹನಗಳ ಕಳ್ಳತನದ ಪೈಕಿ ಶೇ.6 ರಷ್ಟು ಇಳಿಕೆಯಾಗಿದೆ. ಉಳಿದ ಕಳ್ಳತನದಲ್ಲಿ ಶೇ.47 ರಷ್ಟು ಏರಿಕೆಯಾಗಿದೆ ಎಂದು ಹೇಳಿದ್ದಾರೆ. 
ಅಪರಾಧ ಪ್ರಕರಣಗಳು ಹೆಚ್ಚಿರುವುದಕ್ಕೆ ಕಾರಣವನ್ನೂ ನೀಡಿರುವ ಪೊಲೀಸ್ ಕಮಿಷನರ್, ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಕಾಣೆಯಾದ ಮಕ್ಕಳ ಪ್ರಕರಣಗಳಲ್ಲಿಯೂ ಎಫ್ಐಆರ್ ದಾಖಲಿಸುವುದು ಕಡ್ಡಾಯವಾಗಿರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com