ನ್ಯಾಯಾಂಗ ವ್ಯವಸ್ಥೆಯನ್ನು ಕಿವುಡು, ಮೂಕವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ: ಉದ್ಭವ್ ಠಾಕ್ರೆ

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿರುದ್ಧ ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗ ಹೇಳಿಕೆ ನೀಡಿದ್ದು ಸರಿಯಾದ ಕ್ರಮ.......
ಉದ್ಭವ್ ಠಾಕ್ರೆ
ಉದ್ಭವ್ ಠಾಕ್ರೆ
Updated on
ಮುಂಬೈ: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿರುದ್ಧ ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗ ಹೇಳಿಕೆ ನೀಡಿದ್ದು ಸರಿಯಾದ ಕ್ರಮ ಎಂದು ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಹೇಳಿದರು. ದೇಶದಲ್ಲಿ ನ್ಯಾಯಾಂಗವನ್ನು "ಕಿವುಡ ಹಾಗೂ ಮೂಕ"ವನ್ನಾಗಿಸಲು ಪಿತೂರಿ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಹಾಗೆಯೇ ಸರ್ಕಾರ ಯಾವದೇ ಕಾರಣಕ್ಕೂ ಇದರ ಮದ್ಯೆ ತಲೆ ಹಾಕಬಾರದೆಂದು ಅವರು ಆಗ್ರಹಿಸಿದರು.
"ಆ ನ್ಯಾಯಾಧೀಶರ ನಿರ್ಧಾರವನ್ನು ಶ್ಲಾಘಿಸಬೇಕು. ಆದರೆ ಈ ನ್ಯಾಯಾಧೀಶರ ಕ್ರಮದ ವಿರುದ್ಧ ವಿಚಾರಣೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೊಂದು ವೇಳೆ ವಿಚಾರಣೆ ನಡೆದದ್ದಾದರೆ ಅದು ಯಾವ ಪಕ್ಷಪಾತವಿಲ್ಲದೆ ನಡೆಯಬೇಕಿದೆ." ಮುಂಬೈನಲ್ಲಿ ಮಾದ್ಯಮವನ್ನುದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರಪತಿ ರಾಮ ನಾಥ ಕೋವಿಂದ್ ಮುಂಬೈ ಭೇಟಿಯ ಬಗೆಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಠಾಕ್ರೆ "ಮುಂಬೈಗೆ ರಾಷ್ಟ್ರಪತಿಗಳೇಕೆ ಆಗಮಿಸುತ್ತಿದ್ದಾರೆ ತಿಳಿದಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಇಷ್ಟೊಂದು ಸಮಸ್ಯೆಗಳಿದ್ದು ಸಹ ಕೋವಿಂದ್ ಮುಂಬೈ ಭೇಟಿಯ ಅಗತ್ಯವೇನು?" ಎಂದು ಪ್ರಶ್ನಿಸಿದ್ದಾರೆ. 
"ನ್ಯಾಯಮೂರ್ತಿಗಳನ್ನು ಕಿವುಡ ಮತ್ತು ಮೂಕ ರನ್ನಾಗಿಸಲು ಪ್ರಯತ್ನ ನಡೆದಿದೆ. ಸಾರ್ವಜನಿಕರು ರಾಷ್ಟ್ರದ ಬಗೆಗೆಇನ ತಮ್ಮ ಹೊಣೆಗಾರಿಕೆಯನ್ನು ಪೂರೈಸುತ್ತಿದ್ದಾರೆಯೆ ಎನ್ನುವುದು ಈಗಿನ ಪ್ರಶ್ನೆ.ುತ್ತಮ ಆಡಳಿತ ವ್ಯವಸ್ಥೆ ಎಂದರೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮಾತ್ರವೇ ಅಲ್ಲ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸುವ ನ್ಯಾಯಾಧೀಶರ ನಿರ್ಧಾರವು ಜನರಿಗೆ ಆಗಾತ ನಿಡಿದೆ. ಅವರು ನ್ಯಾಯಾಂಗವನ್ನು ನಂಬಬೇಕೇ ಅಥವಾ ಇಲ್ಲವೇ ಎಂದು ಗೊಂದಲದಲ್ಲಿದ್ದಾರೆ" ಎಂದು ಅವರು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳಾದ ಜೆ ಚೆಲಮೇಶ್ವರ್, ರಂಜನ್ ಗೊಗೋಯಿ, ಎಂಬಿ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರುಗಳು ನ್ಯಾಯಾಲಯದ ವ್ಯವಸ್ಥೆ ಕ್ರಮಬದ್ದವಾಗಿಲ್ಲ, ಅಪೇಕ್ಷಣೀಯ ವಾತಾವರಣವಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com