ಹಿಂದೂ ದೇವತೆ ವಿರುದ್ಧ ಹೇಳಿಕೆ ವಿವಾದ: ತಮಿಳು ಗೀತರಚನಕಾರ ವೈರಮುತ್ತು ವಿರುದ್ಧ ಕೇಸ್

ಹಿಂದೂ ದೇವತೆ ಶ್ರೀವಿಲ್ಲಿಪುತ್ತೂರು ಕವಯಿತ್ರಿ ಆಂಡಾಳ್ ವಿರುದ್ಧ ಹೇಳಿಕೆ ನೀಡಿದ್ದ ಗೀತರಚನಕಾರ ವೈರಮುತ್ತು ವಿರುದ್ಧ ದೂರು ದಾಖಲಾಗಿದೆ...
ವೈರಮುತ್ತು
ವೈರಮುತ್ತು
ರಾಜಪಾಳಯಂ(ತಮಿಳುನಾಡು): ಹಿಂದೂ ದೇವತೆ ಶ್ರೀವಿಲ್ಲಿಪುತ್ತೂರು ಕವಯಿತ್ರಿ ಆಂಡಾಳ್ ವಿರುದ್ಧ ಹೇಳಿಕೆ ನೀಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಗೀತರಚನಕಾರ ವೈರಮುತ್ತು ವಿರುದ್ಧ ದೂರು ದಾಖಲಾಗಿದೆ. 
ಕವಯಿತ್ರಿ ಆಂಡಾಳ್ ಕುರಿತಾಗಿ ಚರ್ಚೆ ವೇಳೆ ತಮಿಳು ಗೀತರಚನಕಾರ ವೈರಮುತ್ತು ಅವರು ಆಂಡಾಳ್ ದೇವದಾಸಿ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದು ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು ವೈರಮುತ್ತು ವಿರುದ್ಧ ಕೇಸ್ ದಾಖಲಾಗಿದೆ. 
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ವಿದ್ವಾಂಸ ಸುಭಾಷ್ ಮಲಿಕ್ ಅಧ್ಯಯನದಲ್ಲಿ ಆಂಡಾಳ್ ದೇವದಾಸಿ ಸಮುದಾಯಕ್ಕೆ ಸೇರಿದವರು ಮತ್ತು ತಿರುಚಿರಾಪಳ್ಳಿಯ ಶ್ರೀರಂಗಂ ದೇವಾಲಯದಲ್ಲಿ ನೆಲೆಸಿದ್ದರು ಮತ್ತು ಅಲ್ಲೇ ಮಡಿದರು ಎಂಬ ವಿವರವನ್ನು ಉಲ್ಲೇಖಿಸಿದ್ದರು. 
ವೈರಮುತ್ತು ಅವರ ಹೇಳಿಕೆಯಿಂದ ಬೇಸರಗೊಂಡಿರುವ ಶ್ರೀ ಆಂಡಾಳ್ ದೇವಿಯ ಭಕ್ತ ಸೂರಿ ಎಂಬುವರು ವೈರಮುತ್ತು ವಿರುದ್ಧ ದೂರು ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com