ಜಮ್ಮು ಕಾಶ್ಮೀರ: ಕಾಶ್ಮೀರ ಯುವಕರಿಗಾಗಿ ಸೇನೆಯಿಂದ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ

ಕಾಶ್ಮೀರ ಯು೮ವಕರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ, ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ.......
ಕಾಶ್ಮೀರ ಯುವಕರಿಗಾಗಿ ಸೇನೆಯಿಂದ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ
ಕಾಶ್ಮೀರ ಯುವಕರಿಗಾಗಿ ಸೇನೆಯಿಂದ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ
ಬಾರಮುಲ್ಲಾ: ಕಾಶ್ಮೀರ ಯು೮ವಕರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ, ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಠಾಣ್ ಪ್ರದೇಶದ ಹೈದರ್ ಬೆಗ್ ನಲ್ಲಿನ ರಾಷ್ಟ್ರೀಯ ರೈಫಲ್ಸ್ (ಆರ್ ಆರ್) ನ ಸೆಕ್ಟರ್ 10 ಮುಖ್ಯ ಕಛೇರಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭಿಸಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಉದ್ಯಮನೀತಿಯನ್ನು ಅಳವಡಿಸಿಕೊಂಡಿರುವ ರಾಜ್ಯವು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೇಂದ್ರದ (ಎನ್ ಎಸ್ ಡಿಸಿ) ಸಹಕಾರದೊಡನೆ ಬಾರಾಮುಲ್ಲಾ ಹಾಗೂ ಸಮೀಪದ ಜಿಲ್ಲೆಯ ಪಠಾಣ್ ಸಮುದಾಯದ ನಿರುದ್ಯೋಗಿ ಅಕ್ಷರಸ್ಥ ಯುವಕರಿಗೆ ಹೆಚ್ಚಿನ ಕೌಶಲ್ಯ ತರಬೇತಿಯನ್ನು ನೀಡುತ್ತಿದೆ
ಈ ಯೋಜನೆಯಲ್ಲಿ ಆಯ್ಕೆ ಆದ ಯುವಕರಿಗೆ ಎರಡು ವಾರಗಳ ವಿಶೇಷ ತರಬೇತಿ ನೀಡಲಾಗುವುದು. ಆರಂಭಿಕ ಹಂತದಲ್ಲಿ, ಆಹಾರ ಸಂಸ್ಕರಣ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧ ಶಿಕ್ಷಣ ನೀಡಲಾಗುತ್ತದೆ. ಆಹಾರ ಸಂಸ್ಕರಣಾ ಕೋರ್ಸ್ ನಲ್ಲಿ ಯುವಜನರು ಕಾಲೋಚಿತ ಹಣ್ಣುಗಳ ಆಹಾರ ಸಂರಕ್ಷಣೆ, ಕ್ಯಾನಿಂಗ್ ಮತ್ತು ರಸ ಶೇಖರಣೆಯಲ್ಲಿ ಪರಿಣತಿ ಪಡೆಯುತ್ತಾರೆ, ಅದೇ ರೀತಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಯುವಕರಿಗೆ  ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಅವಕಾಶಗಳ ಬಾಗಿಲು ತೆರೆಯುತ್ತದೆ ಎನ್ನಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com