ಕೋಲ್ಕತ್ತಾ ಸಾಹಿತ್ಯ ಹಬ್ಬ-2018 ರಲ್ಲಿ ಭಾಗವಹಿಸಿ ಮಾತನಾಡಿರುವ ನಯನತಾರಾ ಸೆಹಗಲ್, ಹಿಂದುತ್ವ ಹಿಂದೂ ಧರ್ಮಕ್ಕಿಂತ ಭಿನ್ನವಾಗಿದ್ದು, ಉಂಟಾಗುತ್ತಿರುವ ಹಿಂಸಾಚಾರಕ್ಕೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈಗಿರುವುದು ಅತ್ಯಂತ ಭಿನ್ನವಾದ ಪರಿಸ್ಥಿತಿ, ಪ್ರಸ್ತುತ ಇರುವ ಪರಿಸ್ಥಿತಿ ಯಾರಿಗೂ ಅನುಕೂಲಕರವಾಗಿಲ್ಲ. ಯಾರು ತಮ್ಮ ತತ್ವವನ್ನು ಒಪ್ಪುವುದಿಲ್ಲವೋ ಅಂತಹವರನ್ನು ಹತ್ಯೆ ಮಾಡಲಾಗುತ್ತಿದೆ, ಇತ್ತೀಚೆಗೆ ಗೌರಿ ಲಂಕೇಶ್ ಅವರನ್ನೂ ಹತ್ಯೆ ಮಾಡಲಾಗಿದೆ. ಕೇವಲ ಬರಹಗಾರರಷ್ಟೇ ಅಲ್ಲ, ದನಗಳನ್ನು ಸಾಗಿಸುತ್ತಿರುವವರನ್ನೂ ಹತ್ಯೆ ಮಾಡಲಾಗುತ್ತಿದೆ. ಇಂತಹ ಘಟನೆಗಳನ್ನು ತಡೆಗಟ್ಟಬೇಕಾದರೆ ಹಿಂದುತ್ವವನ್ನು ತಿರಸ್ಕರಿಸಬೇಕು, ಹಿಂದುತ್ವದಿಂದ ಹಿಂಸಾಚಾರ ಉಂಟಾಗುತ್ತಿದೆ. ಹಿಂದುತ್ವ ಅತ್ಯಂತ ಅಪಾಯಕಾರಿ ಸಿದ್ಧಾಂತವಾಗಿದ್ದು, ಹಿಂದೂ ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.