ಭಾರತ-ಇಸ್ರೇಲ್ ಸಂಬಂಧ ಒಂದೇ ವಿಷಯಕ್ಕೆ ಸೀಮಿತವಲ್ಲ: ಪ್ಯಾಲೆಸ್ತೇನ್ ಬಗ್ಗೆ ವಿದೇಶಾಂಗ ಇಲಾಖೆ

ಭಾರತ-ಇಸ್ರೇಲ್ ನ ಸಂಬಂಧ ಪ್ಯಾಲೆಸ್ತೇನ್ ವಿಷಯಕ್ಕೆ ಮಾತ್ರ ಸೀಮಿತವಲ್ಲ, ಅದಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ ಎಂದು ವಿದೇಶಾಂಗ ಇಲಾಖೆ
ಭಾರತ-ಇಸ್ರೇಲ್ ಸಂಬಂಧ ಒಂದೇ ವಿಷಯಕ್ಕೆ ಸೀಮಿತವಲ್ಲ: ಪ್ಯಾಲೆಸ್ತೇನ್ ಬಗ್ಗೆ ವಿದೇಶಾಂಗ ಇಲಾಖೆ
ಭಾರತ-ಇಸ್ರೇಲ್ ಸಂಬಂಧ ಒಂದೇ ವಿಷಯಕ್ಕೆ ಸೀಮಿತವಲ್ಲ: ಪ್ಯಾಲೆಸ್ತೇನ್ ಬಗ್ಗೆ ವಿದೇಶಾಂಗ ಇಲಾಖೆ
ನವದೆಹಲಿ: ಭಾರತ-ಇಸ್ರೇಲ್ ದ್ವಿಪಕ್ಷೀಯ ಮಾತುಕತೆ ವೇಳೆಯಲ್ಲಿ ಪ್ಯಾಲೆಸ್ತೇನ್ ವಿಷಯ ಚರ್ಚೆಯಾಯಿತು, ಆದರೆ ಭಾರತ-ಇಸ್ರೇಲ್ ನ ಸಂಬಂಧ ಪ್ಯಾಲೆಸ್ತೇನ್ ವಿಷಯಕ್ಕೆ ಮಾತ್ರ ಸೀಮಿತವಲ್ಲ, ಅದಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕಯ್ ಕೆ ಗೋಖಲೆ ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ-ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರ ನಡುವೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಿದ ಗೋಖಲೆ, ಮಾತುಕತೆ ವೇಳೆ ಭಾರತ ಪ್ಯಾಲೆಸ್ತೇನ್ ಹಾಗೂ ಜೆರುಸಲೇಮ್ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೆ ನಮ್ಮ ಸಂಬಂಧ ಪ್ಯಾಲೆಸ್ತೇನ್ ವಿಷಯಕ್ಕೆ ಮಾತ್ರ ಸೀಮಿತವಲ್ಲ ಎಂದು ಹೇಳಿದ್ದಾರೆ. 
ವಿಜ್ಞಾನ, ಕೃಷಿ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಕ್ಕೆ ಭಾರತ- ಇಸ್ರೇಲ್ ಉತ್ಸಾಹ ಹೊಂದಿದೆ. ಈ ಕುರಿತು ಉಭಯ ಪ್ರಧಾನಿಗಳೂ ಚರ್ಚೆ ನಡೆಸಿದ್ದು, ಎರಡೂ ರಾಷ್ಟ್ರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಿವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com