ಚೆನ್ನೈ: ಜೆಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಲು ಬಂದಿದ್ದ ಯುವನೋರ್ವ ಗೂಳಿ ತಿವಿತಕ್ಕೆ ಓರ್ವ ಯುವಕ ಬಲಿಯಾಗಿರುವ ಘಟನೆ ಮಧುರೈ ನಲ್ಲಿ ನಡೆದಿದೆ.
ದಿಂಡ್‍ಗಲ್ ಜಿಲ್ಲೆಯ ಯುವಕ ಮೇಲೆ ಗೂಳಿ ದಾಳಿ ಮಾಡಿದ್ದು, ಘಟನೆಯಲ್ಲಿ 25 ಜನರಿಗೆ ಗಾಯಗಳಾಗಿವೆ, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಕಲಿಮುತ್ತು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಕ್ರಾಂತಿ ಆಚರಣೆ ಸಂದರ್ಭದಲ್ಲಿ ತಮಿಳುನಾಡಿನಲಿ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟನ್ನು ಆಚರಿಸಲಾಗುತ್ತದೆ. ಈ ಕ್ರೀಡೆಯಲ್ಲಿ 455 ಗೂಳಿಗಳು ಭಾಗಿಯಾಗಿದ್ದು, ಜ.16 ರಂದು ಮಧುರೈನ ಅಲಂಗನಲ್ಲೂರ್ ನಲ್ಲಿ ನಡೆಯುವ ಜಲ್ಲಿ ಕಟ್ಟು ಕ್ರೀಡೆಯಲ್ಲಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿಯೂ ಭಾಗವಹಿಸಿ ಗೆದ್ದವರಿಗೆ ಬಹುಮಾನ ನೀಡಲಿದ್ದಾರೆ.